ಬೆಂಗಳೂರು, (ಜ.06) : ನಾನು ಹೊನ್ನಾಳಿಯ ಅಂಜದ ಗಂಡು ಯಾರಿಗೂ ಹೆದರುವವನಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಧ್ಯ ಕರ್ನಾಟಕ ಭಾಗದವನು ಅಂತೆಯೆ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಗೌರವಿಸುತ್ತೇನೆ. ಯತ್ನಾಳ್ ಮಂತ್ರಿ ಆಗ್ಲಿಲ್ಲ ಎನ್ನುವ ಕಾರಣಕ್ಕೆ ಭ್ರಮನಿರಸನಗೊಂಡು ಹೀಗೆಲ್ಲಾ ಮಾತಾಡಬಹುದು, ಆದರೆ ಸಂಘಟನೆ ನಮಗೆ ತಾಯಿ ಸಮಾನ ಪಕ್ಷದ ಬಗ್ಗೆ, ನಾಯಕರ ಬಗ್ಗೆ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು ಟಾಂಗ್ ಕೊಟ್ಟರು.
ಸಿಎಂ ಸಭೆಯಲ್ಲಿ ವಿಜಯೇಂದ್ರ ಹೆಸ್ರು ಪ್ರಸ್ತಾಪ: ಯತ್ನಾಳ್- ರೇಣುಕಾಚಾರ್ಯ ಜಟಾಪಟಿ
ಯಡಿಯೂರಪ್ಪ ನಮ್ಮ ಶಾಸಕಾಂಗ ಪಕ್ಷದ ನಾಯಕರು, ಶಾಸಕಾಂಗ ಪಕ್ಷದ ನಾಯಕರ ಬಗ್ಗೆ ಮಾತಾಡಬಾರದು ಹಾಗಂತ ನಾನು ಯಡಿಯೂರಪ್ಪರ ಪರ ಮಾತಾಡಲ್ಲ
ನಾನು ಪಕ್ಷದ ಪರ ಮಾತಾಡ್ತೇನೆ ಎಂದು ಹೇಳಿದರು.
ಮೊನ್ನೇ ಅಷ್ಟೇ ಸಿಎಂ ಕರೆದ ಶಾಸಕರ ಸಭೆಯಲ್ಲಿ ಯಡಿಯೂರಪ್ಪನವರ ಮುಂದೆಯೇ ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಜಟಾಪಟಿ ನಡೆದಿತ್ತು. ಸಭೆಯಲ್ಲಿ ವಿಜಯೇಂದ್ರ ಅವರ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ಗರಂ ಆಗಿದ್ದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಶುರುವಾಯ್ತು ಸಂಕಷ್ಟ…!
ಇನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಹಿರಂಗ ಅಸಮಾಧಾನ ಹೊರ ಹಾಕಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಯತ್ನಾಳ್ ಬಗ್ಗೆ ರಾಷ್ಟ್ರೀಯ ಶಿಸ್ತು ಸಮಿತಿಗೆ ಮಾಹಿತಿ ನೀಡಲಾಗುವುದು. ಅವರ ವಿರುದ್ಧ ಶಿಸ್ತು ಸಮಿತಿಯೇ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.