ಧಾರವಾಡ, (ಜ.06): ಜಮೀನು ವಿಚಾರವಾಗಿ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಪಿಡಿಒ ಅಧಿಕಾರಿ ಭ್ರಷ್ಟಾಚಾರ ವಿರೋಧಿ ಬ್ಯೂರೋ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಶಿವಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಪುಷ್ಪಾ, ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದವರು. ಜಮೀನು ವಿಚಾರಕ್ಕೆ ಸಂಬಂಧಿಸಿ ಸಾಗರ ಹೂಗಾರ ಎಂಬುವವರ ಬಳಿ ಪುಷ್ಪಾ ತನ್ನ ಗಂಡ ಮಹಾಂತೇಶ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಹನಿಟ್ರ್ಯಾಪ್ ಮಾಡಿ 50-60 ಮಂದಿಗೆ ವಂಚಿಸಿದ್ದ ಮಾಜಿ ಶಿಕ್ಷಕಿ ಬಲೆಗೆ
ಜಮೀನೊಂದರ ಎನ್‌ಎ ಮಾಡಲು 20 ರೂ. ಸಾವಿರ ಬೇಡಿಕೆ ಇಟ್ಟಿದ್ದರು. ಈ ಹಣವನ್ನು ಪತಿ ಮಹಾಂತೇಶ ಎಂಬುವರ ಮೂಲಕ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್ಪಿ ವೇಣುಗೋಪಾಲ ಅವರಿದ್ದ ಎಸಿಬಿ ತಂಡ ದಾಳಿ ಮಾಡಿದೆ. ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.