ಇದು ಕಿವಿಮಾತು: ಗ್ರಾ. ಪಂ. ಕೈಯಲ್ಲಿದೆ ಸುಭಿಕ್ಷತೆಯ ಕೀಲಿಕೈ!

0
691

2020 ರಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೇ ಈ ಒಂದು ಸೂಚನೆ ಹಾಗೂ ಸಲಹೆ.

ಗ್ರಾಮ ಪಂಚಾಯಿತಿ – ಸ್ಥಳಿಯ ಸಂಸ್ಥೆಗಳ ಆಡಳಿತ

ಒಂದು ಗ್ರಾಮ ಪಂಚಾಯಿತಿ : 3X3 KM Area.

ಒಂದು ಗ್ರಾಮ ಪಂಚಾಯಿತಿ : 5 ರಿಂದ 7 ಹಳ್ಳಿಗಳು.

ಒಂದು ಗ್ರಾಮ ಪಂಚಾಯಿತಿ: 12 ರಿಂದ 30 ವಾರ್ಡ್ ಗಳು

ವಾರ್ಡ್ ಗೆ 1 ರಿಂದ 4 ಚುನಾಯಿತ ಪ್ರತಿನಿಧಿ.

ಪ್ರತೀ ವಾರ್ಡ್ ನಲ್ಲಿ ಮತದಾರರ ಸಂಖ್ಯೆ : 800 ರಿಂದ 1000

ಪ್ರತೀ ವಾರ್ಡ್ ನಲ್ಲಿ ಇರುವ ಮನೆಗಳು : 100 ರಿಂದ 300

ಪ್ರತೀ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಯ ಜವಾಬ್ದಾರಿ: 100 ಮನೆಗಳು ಹಾಗೂ ಆ ವಠಾರದ ಅವಶ್ಯಕತೆ.

ಮೊಟ್ಟ- ಮೊದಲು, ಆರಿಸಿ ಬಂದ ಪ್ರತಿನಿಧಿಗಳು, ತಮ್ಮ ವಾರ್ಡನ್ನು ಅವರಲ್ಲಿಯೆ ವಿಂಗಡನೆ ಮಾಡಿ, ತಮ್ಮ – ತಮ್ಮ ಜವಾಬ್ದಾರಿಯನ್ನು ನಿರ್ಧರಿಸಬೇಕು.

ತನ್ನ ಜವಾಬ್ದಾರಿಯ ( ಸುಮಾರು 100) ಮನೆಗೆ ಭೇಟಿ ಕೊಟ್ಟು, ತನ್ನ ಮೊಬೈಲ್ ಸಂಖ್ಯೆಯನ್ನು ಎಲ್ಲಾ ಮನೆಯವರಿಗೆ ತಿಳಿಸಬೇಕು. ಹಾಗು ಅವರ ಅವಶ್ಯಕತೆಯನ್ನು ಪ್ರತಿನಿಧಿಗೆ ತಿಳಿಸುವಂತಾಗಬೇಕು.

ಸಾಧ್ಯವಿದ್ದರೆ ಅದಕ್ಕಾಗಿ ಒಂದು ವಾಟ್ಸ್ ಆ್ಯಪ್ ಗ್ರೂಪ್ ಮಾಡಬೇಕು. ಅಲ್ಲಿಯ ಜನರು, ಅವರ ಪ್ರತಿನಿಧಿಗೆ ಅದರ ಮುಖಾಂತರ ತಮ್ಮ ತೊಂದರೆಗಳನ್ನು ತಿಳಿಸ ಬಹುದು.

ಪ್ರತಿನಿಧಿಗಳು, ಅದರ ಮುಖಾಂತರ ಗ್ರಾಮ ಪಂಚಾಯಿತಿಗೆ ಬರುವ ಅನುದಾನಗಳನ್ನು ಪ್ರಜೆಗಳಿಗೂ ತಿಳಿಸಬಹುದು. ಅಷ್ಟೆ ಅಲ್ಲ, ಪ್ರತಿನಿಧಿಗಳು ಸಭೆಯಲ್ಲಿ ಆದ ನಿರ್ಧಾರಗಳನ್ನು ಪ್ರಜೆಗಳಿಗೆ ತಿಳಿಸಬಹುದು.

ಹೀಗೆ, ಗ್ರಾಮ ಪಂಚಾಯಿತಿಯ ಹಾಗು- ಹೋಗುಗಳು ಪ್ರಜೆಗಳಿಗೆ ತಿಳಿಯಲ್ಪಟ್ಟು, ಪ್ರಜೆಗಳೂ ಗ್ರಾಮ ಪಂಚಾಯಿತಿಯ ಅಬಿವೃಧ್ಧಿಯಲ್ಲಿ ಭಾಗವಹಿಸುವಂತಾಗ ಬೇಕು.

ನಿಜವಾದ ಪ್ರಜಾ ಪ್ರಭುತ್ವ ಹಾಗು ಪಾರದರ್ಶಕ ಆಡಳಿತ ಆಗುವುದರಲ್ಲಿ ಸಂಶಯವಿಲ್ಲ.

ಭ್ರಷ್ಟಾಚಾರಕ್ಕೆ ಅವಕಾಶವೇ ಇರುವುದಿಲ್ಲ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಹೊಂದುವುದು.

ಇಲ್ಲಿ PDO -ಪಂಚಾಯಿತಿ ಡೆವಲಪ್ಮೆಂಟ್ ಆಫೀಸರ್ ನ ಪಾತ್ರ ತುಂಬಹ ಪ್ರಾಮುಖ್ಯವಾಗಿದೆ.

ಅವನೂ, ಚುನಾಯಿತ ಪ್ರತಿನಿಧಿಗಳು, ಬಹುಮತದಿಂದ ಒಪ್ಪಿದ ಕೆಲಸವನ್ನು ಮಾಡಬೇಕು.

ಹಣದ ವ್ಯವಹಾರವು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹಾಗು ಪಂಚಾಯಿತಿ ಡೆವಲಪ್ಮೆಂಟ್ ಆಫೀಸರ್(PDO) ಮಾಡುವರು.

ಪಾರದರ್ಶಕತೆ – Transparency ಕೇವಲ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಹುದು.

ಇಲ್ಲವಾದರೆ, ಅದೇ ಕೊಳಕು ನೀರಿನ ಮೀನುಗಳಾಗಿ ಬದುಕುವಂತಾಗ ಬಹುದು.

ಗ್ರಾಮದ ಸ್ವಚ್ಚತೆ

ಒಳ ರಸ್ತೆಗಳು

ಶೌಚ್ಚಾಲಯ

ದಾರಿ ದೀಪ

ಕೆರೆ- ಕಟ್ಟೆಗಳ ನಿರ್ಮಾಣ

ಸಾರ್ವಜನಿಕ ಉದ್ಯಾವನ

ಚರಂಡಿ ವ್ಯವಸ್ಥೆ

ನದಿ-ತೀರ ಅಭಿವೃಧ್ಧಿ

ಸರ್ಕಾರಿ ಶಾಲಾ ಅವಶ್ಯಕತೆ

ಪರಿಸರ ಮಾಲಿನ್ಯ

ಕುಡಿಯುವ ನೀರಿನ ವ್ಯವಸ್ಥೆ

ಸಾರ್ವಜನಿಕ ಆಟದ ಮೈದಾ

ಶವ ಸಂಸ್ಕಾರ (ಸ್ಮಶಾನ) ವ್ಯವಸ್ಥೆ

ಕಸ ವಿಲೇವಾರಿ ( ಸ್ವಚ್ಚ ಭಾರತ್ ಮೀಷನ್)

ಮನೆ ಇಲ್ಲದವರಿಗೆ ಮನೆ ವ್ಯವಸ್ಥೆ ( ಪ್ರಧಾನ ಮಂತ್ರಿ ಆವಾಸ್ ಯೋಜನೆ)

ಅಂಗವಿಕಲರ ಅವಶ್ಯಕತೆ

SC & ST ಯವರಿಗೆ ಬರುವ ಅನುದಾನ

ಹೀಗೆ ಕೆಲವೊಂದು ಕೆಲಸವು ಗ್ರಾಮ ಪಂಚಾಯಿತಿಯ ಜವಾಬ್ದಾರಿ ಹಾಗು ಅದಕ್ಕೆ ಬೇಕಾದ ಅನುದಾನವೂ ಬರುವುದು.

ಹಣದ ಮೂಲ

1.15ನೇ ಫೈನಾನ್ಸ್ ಕಮಿಷನ್ – ಕೇಂದ್ರ ಸರ್ಕಾರದ ಅನುದಾನ.

2. ಕೇಂದ್ರ ಸರ್ಕಾರದ ಯೋಜನೆಗಳು – MGNREGA – ಗ್ರಾಮೀಣ ಪ್ರದೇಶ ಉದ್ಯೋಗ ಖಾತ್ರಿ ಯೋಜನೆ. ಇದರಿಂದ ಗ್ರಾಮದ ಎಲ್ಲಾ ಸಾರ್ವಜನಿಕ ಕೆಲಸವನ್ನು ಮಾಡಿಸಬಹುದು.

3. ಸ್ವಚ್ಚ ಭಾರತ ಮೀಷನ್ (SBM) – ಕೇಂದ್ರ ಸರ್ಕಾರದ ಯೋಜನೆ.

4. ರಾಜ್ಯ ಸರ್ಕಾರದ ಅನುದಾನ-

5. Escro ಹಾಗು ಶಾಸನ ಬದ್ಧ ಅನುದಾನ.

6. ವಸತಿ ಯೋಜನೆ.

7. ಕುಡಿಯುವ ನೀರಿನ ಇಲಾಖೆ ಅನುದಾನ.

8. ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ-

ಆಸ್ತಿ ತೆರಿಗೆ
ಶುಲ್ಕ
ವ್ಯಾಪಾರ ಮಳಿಗೆ
ಲೈಸೆನ್ಸ್
ಹರಾಜು
ಬಾಡಿಗೆ
ವಂತಿಗೆ
ಬಿ.ಪಿ.ಎಲ್, SC, ST, ಅಂಗವಿಕಲರಿಗೆ ಹಾಗು ಆದ್ಯತಾ ಕುಟುಂಬಗಳಿಗೆ ಬರುವ ವೈಯಕ್ತಿಕ ಸೌಕರ್ಯ.

ಹೀಗೆ ಹಲವೊಂದು ಮೂಲದಿಂದ ಕೋಟಿ ಗಟ್ಟಲೆ ಹಣವೂ ಬರುವುದು.

ಇಲ್ಲಿ ಹಣದ ಕೊರತೆ ಇಲ್ಲ, ಹೆಗ್ಗಣಗಳ ಹಾವಳಿ.

ಈ ಸಲ ತುಂಬಹ ಯುವಕರು ಆರಿಸಿ ಬಂದಿರುವಿರಾ.

ತಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿ.

ಪ್ರಜೆಗಳ ತೆರಿಗೆ ಹಣ, ಪ್ರಜೆಗಳ, ಗ್ರಾಮದ, ರಾಜ್ಯದ ಹಾಗು ದೇಶದ ಅಭಿವೃದ್ಧಿಗಾಗಿ ವಿನಿಯೋಗ ಮಾಡಿ.

ಪ್ರಜೆಗಳು, ನಿಮಗೆ, ಗೌರವದಿಂದ ಸೆಲ್ಯೂಟ್ ಹೊಡೆಯುವಂತಾಗಲಿ.

ನಿಮ್ಮ ಮನಸ್ಸೂ ಹೆಮ್ಮೆಯಿಂದ ಹುಬ್ಬಿ ಕೊಳ್ಳುವಂತಾಗಲಿ.

ದೇಶ ಬದಲಾಗಬೇಕು ಅದ್ದರೇ ಒಬ್ಬರ ಕೈಯಲ್ಲಿ ಅಲ್ಲ ಪ್ರತಿ ಒಬ್ಬ ಪ್ರಜೆಗಳ ಕೈಯಲ್ಲಿ ಇದ್ದೆ .

ಎಲ್ಲರಿಗೂ ಒಳ್ಳೆಯದಾಗಲಿ.

ಇಕ್ಬಾಲ್ ಕಾವೂರು

LEAVE A REPLY

Please enter your comment!
Please enter your name here