ಸಿಸಿಬಿ ಯಿಂದ ನಟಿ ರಾಧಿಕಾ ಕುಮಾರಸ್ವಾಮಿ ಗೆ ನೊಟೀಸ್…!!

0
361

ಬೆಂಗಳೂರು : ವಂಚಕ ಯುವರಾಜ್ ಜೊತೆಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಕುಮಾರಸ್ವಾಮಿಯವರು, ನಾನು ಯಾವುದೇ ವ್ಯವಹಾರ ನಡೆಸಿಲ್ಲ. ಅವರು 15 ಲಕ್ಷ ರೂಪಾಯಿ ಪಡೆದಿದ್ದನ್ನು ವಾಪಾಸ್ ನೀಡಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದ್ದರು. ಆದ್ರೇ ಸಿಸಿಬಿಗೆ ಯುವರಾಜ್ ಮೊಬೈಲ್ ನಲ್ಲಿ ಸಿಕ್ಕಂತ ಮಾಹಿತಿಯನ್ನು ಆಧರಿಸಿ, ನಾಳೆ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ನೀಡಿದೆ. ಈ ಮೂಲಕ ನಟಿ ರಾಧಿಕಾ ಕುಮಾರಸ್ವಾಮಿಗೆ ಬಿಗ್ ಶಾಕ್ ನೀಡಿದೆ.

ನಟಿ ರಾಧಿಕಾ ಕುಮಾರಸ್ವಾಮಿಯವರಿಗೆ ಸಿಸಿಬಿ ಗ್ರಿಲ್ ರೆಡಿಯಾಗಿದೆ. ಯುವರಾಜ್ ಜೊತೆಗೆ ಮಾಡಿದಂತ 1.25 ಕೋಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಸಿಕ್ಕ ಸಾಕ್ಷಿಯ ಆಧಾರ ಮೇಲೆ, ನಾಳೆ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ.

ಈ ಹಿನ್ನಲೆಯಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ನಟಿ ರಾಧಿಕಾ ಕುಮಾರಸ್ವಾಮಿ ಸಿಸಿಬಿಯ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

ಹಾಗಾದ್ರೇ ನಾಳೆ ಬೆಳಿಗ್ಗೆ ಸಿಸಿಬಿಯ ಮುಂದೆ ಹಾಜರಾಗುತ್ತಾರಾ.? ವಂಚಕ ಯುವರಾಜ್ ನಿಂದ 1.25 ಕೋಟಿ ಹಣ ಪಡೆದ ಬಗ್ಗೆ ಮಾಹಿತಿ ನೀಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here