ಇರಾಕ್ ನ ಶಿಯಾ ಸೇನಾ ಸಮೂಹದ ಉಪಕಮಾಂಡರ್ ಅಬು ಮಹ್ದಿ ಅಲ್ ಮುಹಂದೀಸ್ ಮತ್ತು ಖಾಸಿಮ್ ಸೊಲೈಮನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾಕ್ನ್ಯಾ ಯಾಲಯ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತನಿಖೆಗೆ ಆದೇಶಿಸಿದ್ದು, ಬಂಧನ ವಾರಂಟ್ ಜಾರಿಗೊಳಿಸಿದೆ.
ಕಳೆದ 2020ರ ಜ.3ರಂದು ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಟ್ರಂಪ್ ಆದೇಶಿಸಿದ ಡ್ರೋನ್ ದಾಳಿಯಲ್ಲಿ ಇರಾನ್ ನ ಸೇನಾ ಮುಖಂಡ ಹಾಗೂ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಖಾಸಿಮ್ ಸೊಲೈಮನಿ ಹತ್ಯೆಗೀಡಾಗಿದ್ದರು.
ಸೇನಾ ಸಮೂಹದ ಉಪ ಕಮಾಂಡರ್ ಹತ್ಯೆಯ ತನಿಖೆ ನಡೆಸಲು ಅಧಿಕಾರ ಹೊಂದಿರುವ ಅಲ್-ರಸಾಫಾ ನ್ಯಾಯಾಲಯ ಇರಾಕಿ ಅಪರಾಧ ಸಂಹಿತೆಯ 406ನೇ ವಿಧಿ ಅನುಸಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಂಧನ ವಾರಂಟ್ ಹೊರಡಿಸಲು ನಿರ್ಧರಿಸಿದೆ.
ಪ್ರಕರಣಗಳ ಕೇಸ್ ಫೈಲ್ ಗಳಲ್ಲಿ ಟ್ರಂಪ್ ಅಧಿಕೃತ ಹೇಳಿಕೆಗಳನ್ನು ಒಳಗೊಂಡಿರುವ ವೀಡಿಯೊಗಳಿದ್ದು, ಅದರಲ್ಲಿ ಡ್ರೋನ್ ದಾಳಿ ನಡೆಸಲು ಆದೇಶ ಹೊರಡಿಸಿದೆ ಎಂದು ಸೂಚಿಸುತ್ತದೆ.
2019ರ ಡಿ.31ರಂದು ಬಾಗ್ದಾದ್ ನಲ್ಲಿನ ಅಮೆರಿಕ ರಾಯಭಾರಿ ಮೇಲೆ ಹತ್ಯೆಗೆ ಪ್ರತಿಕಾರವಾಗಿ ಟ್ರಂಪ್ ಈ ಡ್ರೋನ್ ದಾಳಿಯನ್ನು ಆದೇಶಿಸಿದ್ದರು. ಇದಕ್ಕೆ ಪ್ರತಿಯಾಗಿ ಇರಾಕ್ ತಮ್ಮ ದೇಶದಲ್ಲಿನ ಅಮೆರಿಕ ಸೇನಾ ನೆಲೆಯ ಮೇಲೆ ದಾಳಿ ನಡೆಸಿತ್ತು.