ಹನುಮನ ಹುಟ್ಟಿದ ಡೇಟ್ ಗೊತ್ತಿಲ್ಲ ಅಂದಿದ್ದು ತಪ್ಪಾ? : ಸಿದ್ದು ಪ್ರಶ್ನೆ

0
402

ಚಿಕ್ಕಮಗಳೂರು: ಜಿಲ್ಲೆಯ ಕಡೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಹನುಮ ಹುಟ್ಟಿದ್ದ ಡೇಟ್ ಗೊತ್ತಿಲ್ಲ ಅಂದಿದ್ದು ತಪ್ಪಾ..? ಎಂದು ಪ್ರಶ್ನಿಸಿದ್ದಾರೆ.

ಹನುಮ ಹುಟ್ಟಿದ್ದ ಡೇಟ್ ಗೊತ್ತಿಲ್ಲ ಅಂದಿದ್ದು ತಪ್ಪಾ..? ಅದಕ್ಕೂ ನನ್ನ ಮೇಲೆ ಒಂದು ಟೀಕೆ ಕೇಳಿಬಂತು. ನಾನೊಬ್ಬನೇ ಎಲ್ಲರಿಗೂ ಟೀಕೆ ಮಾಡಲು ಸಿಕ್ಕಿರೋದು. ಬಿಜೆಪಿಯವ್ರು ನನ್ನ ಮೇಲೆ ಬೀಳ್ತಾರೆ, ಜೆಡಿಎಸ್​ನವ್ರೂ ನನ್ನ ಮೇಲೆ ಬೀಳ್ತಾರೆ. ನನ್ನ ರಕ್ಷಣೆಗೆ ನೀವೇ ಬರಬೇಕು ಅಂತಾ ಮಾಧ್ಯಮಗಳನ್ನ ಕೋರಿಕೊಂಡರು.

ಅಲ್ಲದೇ ಹಸು ವಯಸ್ಸಾದ ಮೇಲೆ ಸಾಕೋರು ಯಾರು..? ಮಾರಾಟ ಮಾಡಬೇಡಿ ಅಂತಾ ನೀವು ಹೇಳಿದ್ರೆ ಸಾಕೋರು ಯಾರು..? ಗೋ ಮಾತೆ ಪೂಜೆ ಮಾಡೋರು ಸಾಕ್ತಾರಾ ? ಆ ಗಿರಾಕಿಗಳು ಯಾವತ್ತೂ ಸಗಣಿನೇ ಎತ್ತಿಲ್ಲ. ಆ ಗಿರಾಕಿಗಳು ನಮಗೆ ಪಾಠ ಹೇಳ್ತಾರೆ. ಯಾರು ಹಸುಗಳನ್ನು ಸಾಕ್ತೀವೋ ಅವರಿಗೆ ಸಾಕದೇ ಇರೋರು ಇಂಥದ್ದೆಲ್ಲ ಮಾಡೋದು.

ಇದನ್ನು ಹೇಳಿದ್ರೆ ಸಿದ್ದರಾಮಯ್ಯ ಗೋಮಾತೆ ವಿರೋಧಿ ಅಂತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಾನು ಸ್ವಲ್ಪ ಒರಟ, ಹಳ್ಳಿ ಭಾಷೆಯಲ್ಲಿ ಮಾತಾಡ್ತೀನಿ.. ನನ್ನ ವಿರುದ್ಧ ಟೀಕೆ ಮಾಡಿದ್ದೇ ಮಾಡಿದ್ದು. ಬಿಜೆಪಿ, ಜೆಡಿಎಸ್ ಎಲ್ಲರೂ ನನ್ನ ಮೇಲೆ ಬೀಳ್ತಾರೆ. ಬಿಜೆಪಿಯವ್ರು ಗೋಮಾಂಸ ನಿಷೇಧ ಕಾಯ್ದೆ ತಂದಿದ್ದಾರೆ. ನಾನು ದನದ ಮಾಂಸ, ಎಮ್ಮೆ ಮಾಂಸ ತಿಂದಿಲ್ಲ.. ತಿನ್ನಬೇಕು ಅನ್ನಿಸಿದರೆ ತಿಂತೀನಿ ಅಂದೆ. ನನ್ನ ಇಷ್ಟ ನೀನು ಯಾವನ್ ಕೇಳಕ್ಕೆ ನಂಗಿಷ್ಟ ನಾನು ತಿಂತೀನಿ ಅಂದೆ. ನನ್ನ ವಿರುದ್ದ ಏನು ವ್ಯಾಖ್ಯಾನಗಳು, ಚರ್ಚೆಗಳು..? ವೋಟು ಹಾಕಲು ಹೋದಾಗ ನಮ್ಮ ಪಾರ್ಟಿಯವನು ಊಟಕ್ಕೆ ಕರೆದೊಯ್ದ. ಅವತ್ತು ಕೋಳಿ ಮಾಡಿದ್ರು, ಅವತ್ತೇ ಹನುಮ ಜಯಂತಿ. ನಮ್ಮ ಹುಡುಗ ಮಾಂಸ ತಿನ್ನಲ್ಲ ಹನುಮ ಜಯಂತಿ ಅಂದ. ಹನುಮ ಹುಟ್ಟಿದ್ದು ಯಾರಿಗೆ ಗೊತ್ತು, ನಮಗ್ಯಾರಿಗೂ ಗೊತ್ತಿಲ್ಲ. ಮಾಂಸ ತಿಂದರೆ ಏನು, ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ..? ಹನುಮ ಯಾವತ್ತು ಹುಟ್ಟಿದ್ದ ನಿಮಗೆ ಗೊತ್ತಾ..? ಎಂದು ಪ್ರಶ್ನೆ ಮಾಡಿದರು.

ಕುರುಬರನ್ನು ಎಸ್ಟಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ.. ಅದಕ್ಕೆ ವಿರೋಧವಿಲ್ಲ. ಈಗ ಅವ್ರು ಮಾಡ್ತಾ ಇರೋ ಪಾದಯಾತ್ರೆ, ಹೋರಾಟದ ಅಗತ್ಯವಿಲ್ಲ. ಇನ್ನೂ ಕುಲಶಾಸ್ತ್ರದ ವರದಿ ಬಂದಿಲ್ಲ. ಈಗಾಗಲೇ 4 ಜಿಲ್ಲೆಯದ್ದು ಕಳುಹಿಸಿದ್ದೇವೆ.. ಅದ್ರ ವರದಿ ಬಂದಿಲ್ಲ. ಅಗತ್ಯ ಬಿದ್ದಾಗ ಬೀದಿಗಿಳಿದು ಹೋರಾಟ ಮಾಡೋಣ, ಈಗ ಅಗತ್ಯವಿಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here