ಗೋ ಕೊರೋನಾ ಗೋ ನಂತರ ನೋ ಕೊರೋನಾ ನೋ ಎಂದು ಕೇಂದ್ರ ಮಂತ್ರಿ ರಾಮದಾಸ್ ಅಠಾವಳೆ ನಗೆಪಾಟಲಿಗೀಡಾಗಿದ್ದಾರೆ.
ಸೂಪರ್ ಸ್ಪೀಡ್ ಕೊರೋನಾ ಬಗ್ಗೆ ಮಾತನಾಡುತ್ತಾ ನೋ ಕೊರೋನಾ ನೋ ಎನ್ನುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಈ ಹಿಂದೆ ಗೋ ಕೊರೋನಾ ಗೋ ಎಂದಿದ್ದೆ, ಆದರೆ ಕೊರೋನಾ ನನ್ನ ಬಳಿಯೇ ಬಂದಿತ್ತು. ಇದೀಗ ಹೊಸ ರೂಪದ ಕೊರೋನಾಗೆ ನೋ ಎನ್ನುತ್ತೇನೆ ಎಂದಿದ್ದಾರೆ. ಹಿಂದೆ ನಾನು ಕೊರೋನಾಗೆ ಗೋ ಅಂದಿದೆ, ಅದರಂತೆಯೇ ಕೊರೋನಾ ಹೊರಟುಹೋಗುತ್ತಿದೆ. ಈಗ ನೋ ಕೊರೋನಾ ಎನ್ನುತ್ತಿರುವುದರ ಅರ್ಥ ಮತ್ತೆ ಕೊರೋನಾ ನನ್ನ ಬಳಿ ಬರಲಿ ಎಂದಲ್ಲ, ನನಗೆ ಹೊಸ ಕೊರೋನಾ ಬೇಡ,ಹಳೆ ಕೊರೋನಾ ಕೂಡ ಬೇಡ ಎಂದಿದ್ದಾರೆ.