ಈಗಿನ ದಿನಗಳಲ್ಲಿ ಒಂದು ಸಂಸಾರ ನಡೆಸೋದೆ ಕಷ್ಟ. ಇನ್ನು ಎರಡು ಮದುವೆಯಾಗಿ ಇಬ್ಬರು ಹೆಂಡತಿಯರ ಜೊತೆ ಸಂಸಾರ ನಡೆಸುವುದು ಎಷ್ಟು ಕಷ್ಟ ಅನ್ನೋದನ್ನು ಹೇಳಬೇಕಾಗಿಲ್ಲ.
ಆದರೆ ಇಲಿಯೊಬ್ಬ ಧೈರ್ಯ ಮಾಡಿ ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾಗಿದ್ದಾನೆ. ಹೌದು, ಛತ್ತೀಸ್ಗಡದ ವ್ಯಕ್ತಿಯೊಬ್ಬ ಇಬ್ಬರು ಹುಡುಗಿಯರು ಪ್ರೀತಿಸಿದ್ದರು. ಅವರು ಇಬ್ಬರೂ ಆತನನ್ನೇ ಮದುವೆಯಾಗಲು ಬಯಸಿದ್ದರು. ಇದಕ್ಕೆ ಹುಡುಗ ಕೂಡ ಒಪ್ಪಿದ್ದನು. ಈ ಹಿನ್ನೆಲೆ ಮನೆಯವರ ಒಪ್ಪಿಗೆ ಪಡೆದು ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾಗಿದ್ದಾನೆ.
ಮೊದಲಿಗೆ ಚಂದು ಎಂಬ ವರನಿಗೆ ಸುಂದರಿ ಎಂಬ ಹುಡುಗಿ ಜೊತೆ ಮೊದಲು ಪ್ರೀತಿ ಚಿಗುರಿತ್ತು. ಆಕೆಯ ಜೊತೆ ವಾಸ ಶುರು ಮಾಡಿದ್ದ. ಬಳಿಕ ಕೆಲವೇ ದಿನಗಳ ನಂತರ ಮನೆ ಪಕ್ಕದಲ್ಲಿ ವಾಸವಾಗಿದ್ದ ಹಸೀನಾ ಮೇಲೂ ಪ್ರೀತಿ ಶುರುವಾಗಿ ಆಕೆ ಮನೆಯಲ್ಲಿ ಚಂದು ವಾಸಿಸಲು ಶುರು ಮಾಡಿದ್ದ. ನಂತರ ಮೂವರು ಮಾತನಾಡಿ ಮದುವೆಯಾಗುವ ನಿರ್ಧಾರ ತೆಗೆದುಕೊಂದಿದ್ದಾರೆ