ಬೀಚ್ ಪಾರ್ಟಿ ಮಾಡಿದ್ರೆ ಪೊಲೀಸ್ ಕ್ಲಾಸು ಗ್ಯಾರಂಟಿ: 70 ಯುವಕರು ‘ಬೇಡಪ್ಪಾ’ ಅಂದ್ರು!

0
485

ಮಂಗಳೂರು: ಬೀಚ್​ಗಳಲ್ಲಿ ಸಂಜೆ ವೇಳೆ ಮದ್ಯಪಾನ ಮಾಡುತ್ತಿದ್ದವರು ಹಾಗೂ ಸುಖಾಸುಮ್ಮನೆ ತಿರುಗಾಡುತಿದ್ದವರಿಗೆ ಮಂಗಳೂರು ಪೊಲೀಸರು ಪಾಠ ಮಾಡಿದ್ದಾರೆ.ನೂತನ ಪೊಲೀಸ್ ಕಮಿಷನರ್ ಶಶಿಕುಮಾರ್ ಸೂಚನೆ ಮೇರೆಗೆ ಫೀಲ್ಡ್​ಗೆ ಇಳಿದ ಪೊಲೀಸ್ ಅಧಿಕಾರಿಗಳು ಮಂಗಳೂರಿನ ಪ್ರಸಿದ್ಧ ಬೀಚ್​ಗಳಾದ ಪಣಂಬೂರು, ತಣ್ಣಿರುಬಾವಿ , ಸುರತ್ಕಲ್ ಹಾಗೂ ಉಳ್ಳಾಲದ ಬೀಚ್​​ಗಳಲ್ಲಿ ರೇಡ್ ನಡೆಸಿದರು.ಸಂಜೆ 7 ಗಂಟೆಯಾದರೂ ಮನೆಗಳಿಗೆ ತೆರಳದೇ ಬೀಚ್​ನಲ್ಲಿ ತಿರುಗಾಡುತಿದ್ದವರು ಹಾಗೂ ತಮ್ಮ ಗಾಡಿಗಳಲ್ಲಿ ಮದ್ಯಪಾನ ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದರು. 74 ಯುವಕರನ್ನು ವಶಕ್ಕೆ ಪಡೆದು ಕಮಿಷನರ್ ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗೇ 8 ಮಂದಿ ಕಾಲೇಜು ಹುಡುಗಿಯರು ಸೇರಿದಂತೆ ಹಲವರಿಗೆ ವಾರ್ನ್ ಮಾಡಿ ಕಳಿಸಿದ್ದಾರೆ ಎಂದು ತಿಳಿದುಬಂದಿದೆ

LEAVE A REPLY

Please enter your comment!
Please enter your name here