ಸಿಸಿಬಿ ಮುಂದೆ ರಾಧಿಕಾ ಕುಮಾರಸ್ವಾಮಿ!

0
377

ಬೆಂಗಳೂರು:​ ನಟಿ ರಾಧಿಕಾ ಕುಮಾರಸ್ವಾಮಿ ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ತಮ್ಮ ಸಹೋದರ ರವಿರಾಜ್​ ಜೊತೆಗೆ ಸಿಸಿಬಿ ಕಚೇರಿಗೆ ಬಂದಿದ್ದಾರೆ.

ಆರ್​ಎಸ್​​ಎಸ್​-ಬಿಜೆಪಿ ಮುಖಂಡರ ಹೆಸರು ಹೇಳಿಕೊಂಡು ವಂಚಿಸುತ್ತಿದ್ದ ಆರೋಪದ ಮೇಲೆ ಅರೆಸ್ಟ್​ ಆಗಿರುವ ಯುವರಾಜ್ ಅಲಿಯಾಸ್​ ಸ್ವಾಮಿ, ಡೀಲ್​ವೊಂದರ ಭಾಗವಾಗಿ ರಾಧಿಕಾ ಅವರ ಅಕೌಂಟ್​ಗೆ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾನೆಂಬ ಆರೋಪ ಕೇಳಿಬಂದಿತ್ತು. ಇದೇ ಪ್ರಕರಣ ಸಂಬಂಧ ರಾಧಿಕಾ ಸಹೋದರ ರವಿರಾಜ್​ರನ್ನ ಒಂದು ವಾರದ ಹಿಂದೆ ಸಿಸಿಬಿ ವಿಚಾರಣೆಗೆ ಒಳಪಡಿಸಿತ್ತು.

ಇದರ ಬೆನ್ನಲ್ಲೇ ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ್ದ ರಾಧಿಕಾ ಕುಮಾರಸ್ವಾಮಿ, ಯುವರಾಜ್ ಕೋಟ್ಯಾಂತರ ರೂಪಾಯಿ ಹಣ ಜಮೆ ಮಾಡಿದ್ದಾರೆ ಅನ್ನೋದೆಲ್ಲಾ ಸುಳ್ಳು ಎಂದು ಹೇಳಿದ್ದರು. ಯುವರಾಜ್​ರ ಪತ್ನಿಯ ಹೆಸರಿನ ಬ್ಯಾನರ್​ನಲ್ಲಿ ನಾನು ಐತಿಹಾಸಿಕ ಸಿನಿಮಾವೊಂದನ್ನ ಮಾಡಲು ಒಪ್ಪಿದ್ದೆ.

ಅಕ್ಕಾಗಿ 15 ಲಕ್ಷ ರೂಪಾಯಿ ಅಡ್ವಾನ್ಸ್​ ಹಣವನ್ನ ಯುವರಾಜ್ ಹಾಕಿದ್ದಾರೆ. ಮತ್ತೊಬ್ಬರ ಅಕೌಂಟ್​ನಿಂದ ₹60 ಲಕ್ಷ ಹಣ ಬಂದಿದೆ, ಆದ್ರೆ ಆ ವ್ಯಕ್ತಿ ಯಾರು ಅನ್ನೋದು ನನಗೆ ಗೊತ್ತಿಲ್ಲ ಎಂದಿದ್ದರು.

ಇದರ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ರಾಧಿಕಾ ಅವರಿಗೆ ನಿನ್ನೆ ನೋಟಿಸ್ ಕೊಟ್ಟಿದ್ದರು. ಈ ಹಿನ್ನೆಲೆ ರಾಧಿಕಾ ಇಂದು ಸಿಸಿಬಿ ಅಧಿಕಾರಿಗಳ ಎದುರು ಹಾಜರಾಗಿದ್ದಾರೆ. ಸಿಸಿಬಿ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಸಿಬಿ ಇನ್ಸ್ ಪೆಕ್ಟರ್ ಅಂಜುಮಾಲಾ ರಾಧಿಕಾ ಅವರನ್ನ ವಿಚಾರಣೆ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here