ಮಾಜಿ ಸಿಎಂ ಮತ್ತು ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅವರು ಕೊಟ್ಟ ಹೇಳಿಕೆ. ‘ಕೊಡವರು ಕೂಡ ಗೋಮಾಂಸ ತಿಂತಾರೆ’ ಎಂದಿದ್ದ ಹೇಳಿಕೆ. ಸಿದ್ದರಾಮಯ್ಯ ಅವರ ಈ ಹೇಳಿಕೆಯಿಂದ ಕೊಡವರ ಭಾವನೆಗೆ ಧಕ್ಕೆಯಾಗಿದೆ ಅಂತ ರವಿ ಕುಶಾಲಪ್ಪ ಎಂಬುವವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರು ಆಧರಿಸಿ ಸಿದ್ದರಾಮಯ್ಯ ವಿರುದ್ಧ FIR ದಾಖಲಿಸಲಾಗಿದೆ. ಹಾಗಾದ್ರೆ ಅಂದು ಸಿದ್ದರಾಮಯ್ಯ ಹೇಳಿದ್ದೇನು ಅಂತ ನೋಡೋದಾದ್ರೆ, ‘ಮುಸ್ಲಿಮರು ಮಾತ್ರ ಗೋಮಾಂಸ ತಿನ್ನಲ್ಲ. ದಲಿತರು ತಿಂತಾರೆ, ಕ್ರಿಶ್ಚಿಯನ್ನರು ತಿಂತಾರೆ, ಕೊಡವರು ಕೂಡ ಗೋಮಾಂಸ ತಿಂತಾರೆ, ಎಲ್ರೂ ತಿಂತಾರೆ. ನಂಗೂ ತಿನ್ನಬೇಕು ಅನಿಸಿದ್ರೆ ತಿಂತೀನಿ. ಯಾರು ಏನು ತಿನ್ನಬೇಕು ಅನ್ನೋದು ಅವರವರ ಇಚ್ಛೆಗೆ ಬಿಟ್ಟಿದ್ದು.ಇದನ್ನ ಕೇಳೋ ಅಧಿಕಾರ ಯಾರಿಗೂ ಇಲ್ಲ’ ಅಂತ ಸಿದ್ದರಾಮಯ್ಯ ಹೇಳಿದ್ದರು.