ಅಧಿಕಾರಿಗಳ ವಿರುದ್ಧ ಇಂದು ಸಂಸದ ಮುನಿಸ್ವಾಮಿ ರೇಗಾಟ

0
436

ಕೋಲಾರ, ಜನವರಿ 08: “ಯಾರದ್ದೋ ಗುಲಾಮರಾಗಿ ಇರಬೇಡಿ, ಹೀರೋ ತರ ರಿಟೈರ್ ಆಗಿ ಮನೆಗೆ ಹೋಗಿ. ವಿಲನ್ ಆಗಬೇಡಿ” ಎಂದು ಸಹಕಾರ ಇಲಾಖೆ ಅಧಿಕಾರಿಗಳ ವಿರುದ್ಧ ಕೋಲಾರ ಸಂಸದ ಎಸ್. ಮುನಿಸ್ವಾಮಿ ಹರಿಹಾಯ್ದರು.

ಶುಕ್ರವಾರ ಕೋಲಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಯಿತು. ಸಂಸದ ಮುನಿಸ್ವಾಮಿ, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಆಗ ಸಹಕಾರ ಇಲಾಖೆ ಅಧಿಕಾರಿಗಳ ವಿರುದ್ಧ ಸಂಸದರು ಗರಂ ಆದರು.

ಮತ್ತೆ ಮಾತಿನಿಂದಲೇ ಸುದ್ದಿಯಾದ ಮಾಧುಸ್ವಾಮಿ!

“ಯಾರದ್ದೋ ಗುಲಾಮರಾಗಿ ಇರಬೇಡಿ, ಹೀರೋ ತರ ರಿಟೈರ್ ಆಗಿ ಮನೆಗೆ ಹೋಗಿ, ವಿಲನ್ ಆಗಬೇಡಿ.

“ಯಾರದ್ದೋ ಗುಲಾಮರಾಗಿ ಇರಬೇಡಿ, ಹೀರೋ ತರ ರಿಟೈರ್ ಆಗಿ ಮನೆಗೆ ಹೋಗಿ, ವಿಲನ್ ಆಗಬೇಡಿ.

ನಿಮ್ಮಷ್ಟಕ್ಕೆ ಬಂದವರಿಗೆ ಮಾತ್ರ ಸಾಲಾ ಕೊಡುತ್ತೀರಾ?, ಸಹಕಾರ ಸಂಘದ ಸದಸ್ಯರ ಮತಗಳನ್ನು ಅನೂರ್ಜಿತ ಮಾಡಿದ್ದೀರಾ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನಿಮಗೆ ಬೇಕಾದವರು ಹೇಳಿದ್ದಾರೆಂದು ಸದಸ್ಯರ ಮತಗಳೇ ಇಲ್ಲದಂತೆ ಮಾಡಿದ್ದೀರಾ?. ಸಹಕಾರ ಸಂಘದ ಹಸ್ತಲಾಘವ ಚಿಹ್ನೆ ಕೋಲಾರದಲ್ಲಿ ಬೇರೊಂದು ರೀತಿಯಲ್ಲಿದೆ. ಯಾರದ್ದೋ ಮಾತು ಕೇಳಿದರೆ ಕಂಬಿ ಎಣಿಸುತ್ತೀರಾ ಹುಷಾರ್” ಎಂದು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ನೀಲಪ್ಪನವರ್‌ಗೆ ಸಂಸದ ಮುನಿಸ್ವಾಮಿ ಎಚ್ಚರಿಕೆಯನ್ನು ನೀಡಿದರು. ಎಂಎಲ್‌ಸಿ ಗೋವಿಂದರಾಜು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ್ಯ ಸಿ. ಎಸ್. ವೆಂಕಟೇಶ್ ಸಹ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

“ಕೋಲಾರದಲ್ಲಿ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಕಾರ್ಯಕ್ರಮಕ್ಕೆ ಯಾರನ್ನೂ ಕರೆಯದೇ ರಾಜಕೀಯ ಮಾಡುತ್ತಿದ್ದೀರಿ” ಎಂದು ವಿಧಾನ ಪರಿಷತ್ ಸದಸ್ಯರು, ಸಂಸದರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ತುಮಕೂರಿನಲ್ಲಿ ಗುರುವಾರ ಕೆಡಿಪಿ ಸಭೆ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಿದ್ದರು.

LEAVE A REPLY

Please enter your comment!
Please enter your name here