2021 ರ IPL ಗೆ ಭರದ ಸಿದ್ದತೆ

0
438

ನವದೆಹಲಿ: 2021ರ ಐಪಿಎಲ್‌ ಸಿದ್ಧತೆ ಶುರುವಾಗಿದ್ದು, ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ 11ರಂದು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

ಇನ್ನು ಎಲ್ಲ 8 ತಂಡಗಳಿಗೆ ತಮ್ಮ ಯಾವ ಆಟಗಾರರನ್ನ ಉಳಿಸಿಕೊಳ್ಳಬೇಕು ಹಾಗೂ ಯಾವ ಆಟಗಾರನಿಗೆ ತಂಡದಿಂದಕೋಕ್‌ ನೀಡಬೇಕು ಎಂದು ಪಟ್ಟಿ ಸಿದ್ದಪಡಿಸಿ, ನಂತ್ರ ಆ ಪಟ್ಟಿಯನ್ನ ಜ.21ರೊಳಗೆ ಸಲ್ಲಿಸಬೇಕು ಎನ್ನುವ ಗಡುವು ನೀಡಲಾಗಿದೆ. ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರರನ್ನು ಬದಲಿಸಿಕೊಳ್ಳಲು ಫೆ.4ರವರೆಗೂ ಸಮಯ ನೀಡಲಾಗಿದೆ ಎಂದು ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ತಿಳಿಸಿದರು.

ಕೆಲ ದಿನಗಳ ಹಿಂದಷ್ಟೇ ಬ್ರಿಜೇಶ್‌ ಹಾಗೂ ಆಡಳಿತ ಮಂಡಳಿ ಸದಸ್ಯರು ಸಭೆ ನಡೆಸಿ ಚರ್ಚಿಸಿದ್ದು, ಈ ಬಾರಿ ಹರಾಜಿನಲ್ಲಿ ಆಟಗಾರರ ಖರೀದಿಗೆ ಹೆಚ್ಚುವರಿ ಮೊತ್ತ ಬಳಕೆಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.

ಇನ್ನು ಹರಾಜಿಗೂ ಮುನ್ನ ಕೆಲ ದುಬಾರಿ ಆಟಗಾರರನ್ನ ತಂಡಗಳು ಕೈಬಿಡುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here