2021ರಲ್ಲಿ ವಿಶೇಷ ತುಂಬಾ ಇದೆ!
ಮಂಗಳೂರು : ಹೊಸ ವರ್ಷ ಬರುತ್ತಿದೆ ಅಂದ್ರೆ ಯುವಕರಿಗೆ ಅದೇನೋ ವಿಶೇಷ ವರ್ಷದ ಕಾತರ. ಹಳೆಯ ವಿಚಾರ ಮರೆತು ಹೊಸ resolution ತಯಾರಿ ಮಾಡಿ ಜನವರಿ ಮೊದಲ ದಿನವೇ ಮರೆತು ಬಿಡುವುದು. ಹಿರಿಯರಿಗೆ ಹೊಸ ವರ್ಷ ಅಷ್ಟೇನೂ ವಿಶೇಷ ಅನಿಸುವುದಿಲ್ಲ. ಆದರೆ ಈ ಬಾರಿ ಎಲ್ಲರೂ 2012 ರ ವಿಶೇಷದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಇದಕ್ಕೆ ಕಾರಣ ಕೊರೊನ ವೈರಸ್ . ಈ ವರ್ಷ ಏನೇನಾಗುತ್ತೆ?

ಭಾರತೀಯ ನಂಬಿಕೆ ಪ್ರಕಾರ ಯುಗಾದಿ ಹೊಸ ವರ್ಷದ ದಿನ. ಇದ್ರಲ್ಲೂ ಸೌರಮಾನ ಮತ್ತು ಚಾಂದ್ರಮಾನ ಯುಗಾದಿ ಇದೆ. ಹಿಂದೂ ಪಂಚಾಂಗಗಳು ಈ ಯುಗಾದಿ ಪ್ರಕಾರ ಆರಂಭಗೊಳ್ಳುತ್ತವೆ. ಪ್ರಚಲಿತದಲ್ಲಿರುವ ಕ್ಯಾಲೆಂಡರ್ ವರ್ಷ ಮಾತ್ರ ಜನವರಿ 1 ರಿಂದ ಆರಂಭವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.

ವಿಶ್ವದೆಲ್ಲೆಡೆ ಬೇರೆ ಬೇರೆ ಪಂಚಾಂಗ ಅಥವಾ ಕ್ಯಾಲೆಂಡರ್ ಇರುವುದು ತಿಳಿದಿದೆ. ಚೀನಾದಲ್ಲಿ ಸಂಪ್ರದಾಯ ಪ್ರಕಾರ ಅವರದ್ದೇ ಒಂದು ಕ್ಯಾಲೆಂಡರ್ ಇದೆu ಇದರ ಪ್ರಕಾರ ಒಂದೊಂದು ತಿಂಗಳನ್ನು ಒಂದೊಂದು ಪ್ರಾಣಿಯ ಗುರುತಿನಿಂದ ಉಲ್ಲೇಖಿಸಲಾಗುತ್ತದೆ. ಭಾರತದಲ್ಲಿ ರಾಶಿ ಲೆಕ್ಕಾಚಾರ ಹಾಕಿದಂತೆ. ಚೀನಾದ ಪ್ರಸಿದ್ದ ಜ್ಯೋತಿಷ್ಯ ತಜ್ಞ ಎಂದು ಹೇಳಲಾಗುವ ನಾಸ್ಟ್ರಾಡಾಮಸ್ ಸಾವಿರ ವರ್ಷಗಳ ಹಿಂದೆಯೇ ಮುಂದೆ ಏನೇನು ಆಗಲಿದೆ ಎಂದು ತನ್ನ ಸಾವಿಗೆ ಮುನ್ನವೇ ಬರೆದಿದ್ದಾನೆ ಎಂಬ ಪುರಾವೆ ಇದೆ. 2020 ರಲ್ಲಿ ಮಹಾ ಮಾರಿ ಭೂಗೋಳವನ್ನು ತಲ್ಲಣಗೊಳಿಸಲಿದೆ ಎಂದು ಹೇಳಿದ್ದ ಎಂದು ಮಾಧ್ಯಮಗಳು ಪ್ರಸಾರಮಾಡಿದ್ದವು.

ಹಾಗೆಯೇ ಚೀನಾದ ಫೆಂಗ್-ಶುಯಿ ಕೂಡಾ ವಾಸ್ತು ಪ್ರಿಯರು ನಂಬುವಂತಹದ್ದಾಗಿದೆ.
ಚೀನಾದ ಸಾಂಪ್ರದಾಯಿಕ ಕ್ಯಾಲೆಂಡರ್ ಪ್ರಕಾರ 2021 ಎತ್ತು ರಾಶಿಯವರ ವರ್ಷವಾಗಿದೆ. (ಭಾರತೀಯ ವೃಷಭ ರಾಶಿ ಗಿಂತ ಭಿನ್ನವಾಗಿದೆ).

2021 ರಲ್ಲಿ 1961,1973,1985,1997 ಮತ್ತು 2009ಇಸವಿಗಳಲ್ಲಿ ಜನಿಸಿದವರೆಲ್ಲರಿಗೂ ಶುಭಫಲ ಇರುತ್ತದೆ ಎಂದು ಹೇಳಲಾಗುತ್ತದೆ. ಎತ್ತುವಿನ ಗುಣಲಕ್ಷಣಗಳು ಇವರೆಲ್ಲರಿಗೂ ಇದ್ದು, ಅವೆರೆಲ್ಲ ತಮ್ಮ ಪಾಸಿಟಿವ್ ಮತ್ತು ನೆಗೆಟಿವ್ ವಿಚಾರಗಳನ್ನು ox ಜೊತೆಗೆ ಹೋಲಿಕೆ ಮಾಡಿಕೊಳ್ಳಬೇಕು. ಆಗ ತಮ್ಮ ವಿರೋಧಿಗಳ (ವ್ಯಕ್ತಿಗತ ಮತ್ತು ನೈಸರ್ಗಿಕ ) ತಿಳಿದುಕೊಳ್ಳುವುದು ಯಶಸ್ಸಿನ ಮಾರ್ಗ ಎಂದು ಹೇಳಲಾಗಿದೆ.
ಚೀನಾದಲ್ಲಿಯೇ 2020ರ ಮಹಾಮಾರಿ ವೈರಸ್ ಮೊದಲು ಕಾಣಿಸಿದ ಕಾರಣ ಅಲ್ಲಿನ ಭವಿಷ್ಯ ಶಾಸ್ತ್ರದ ಮೇಲೆ ಹೆಚ್ಚಿನ ಗಮನ ಹರಿದಿದೆ.
ಇನ್ನು ಭಾರತ ಎದುರಿಸಲು ಇರುವ ಸಮಸ್ಯೆಗಳ ಬಗ್ಗೆ ಸಂಖ್ಯಾಶಾಸ್ತ್ರ ತಜ್ಞರು ಈಗಲೇ ಶುಭ ವರ್ಷ ಎಂದು ಹೇಳಿದ್ದಾರೆ.
ಆದರೆ ಜ್ಯೋತಿಷ್ಯ ತಜ್ಞರು ಆರ್ಥಿಕ ಕ್ಷೋಭೆ ಮತ್ತು ನೈಸರ್ಗಿಕ ವೈಪರೀತ್ಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಖಗೋಳತಜ್ಞರು ನಾಲ್ಕು ಗ್ರಹಣಗಳ ನ್ನು ಉಲ್ಲೇಖ ಮಾಡಿದ್ದಾರೆ. ಇದರ ಪ್ರಕಾರ 10 ಜೂನ್ ಮತ್ತು 4 ಡಿಸೆಂಬರ್ ರಂದು ಸೂರ್ಯ ಗ್ರಹಣ ಮತ್ತು 26 ಮೇ ಮತ್ತು 18 ನವೆಂಬರ್ ರಂದು ಚಂದ್ರಗ್ರಹಣ ಇರಲಿದೆ.

ಏನೇ ಆದರೂ ಒಳ್ಳೆಯದು ಆಗಲಿ ಎಂಬ ಆಶಾಭಾವನೆ ಜೊತೆಗೆ ಎಲ್ಲರಿಗೂ 2021 ರ ಶುಭಾಶಯಗಳನ್ನು ಹಂಚೋಣ.
ಮಂಗಳೂರು ವಾರ್ತೆ