Monday, October 2, 2023
HomeUncategorizedಹೃದಯ ವೈಶಾಲ್ಯತೆ ಮೆರೆದ ಬಿಎಂಟಿಸಿ ಕಂಡಕ್ಟರ್! ವರನಿಂದ ವಂಚಿತ ವಧುವಿನ ಗಂಡನಾದ!

ಹೃದಯ ವೈಶಾಲ್ಯತೆ ಮೆರೆದ ಬಿಎಂಟಿಸಿ ಕಂಡಕ್ಟರ್! ವರನಿಂದ ವಂಚಿತ ವಧುವಿನ ಗಂಡನಾದ!

- Advertisement -Renault

Renault
Renault

- Advertisement -

ಚಿಕ್ಕಮಗಳೂರು : ಆತ ರಾತ್ರಿ ರಿಸೆಪ್ಶನ್ ಮಾಡಿಸಿಕೊಂಡಿದ್ದ. ವಧುವಿನ ಜೊತೆಗೆ ನಿಂತು ಪೋಟೋಕ್ಕೂ ಪೋಸ್ ಕೊಟ್ಟಿದ್ದ. ಆದರೆ ಮದುವೆಯ ಹೊತ್ತಿಗೆ ಮಾತ್ರ ವರ ನಾಪತ್ತೆಯಾಗಿದ್ದಾನೆ. ಮದುಮಗಳಾಗಿ ನಿಂತಿದ್ದ ಯುವತಿಯನ್ನ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಕೈ ಹಿಡಿದ ಅಪರೂಪದ ಮದುವೆಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸಾಕ್ಷಿಯಾಗಿದೆ.

ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಎಂಬ ಅಣ್ಣತಮ್ಮಂದಿರಿಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಿಂದ ಹೆಣ್ಣು ತಂದಿದ್ದರು. ಅಶೋಕ್ ಮದುವೆ ದಾವಣಗೆರೆ ಮೂಲದ ಯುವತಿಯೊಂದಿಗೆ ಮುಗಿದಿದೆ. ಆದರೆ, ನವೀನ್ ಮದುವೆಯಾಗಬೇಕಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸರಪನಹಳ್ಳಿಯ ಯುವತಿ ಸಿಂಧುವನ್ನ ಛತ್ರದಲ್ಲೇ ನೋಡಿ ಬೆಂಗಳೂರಿನ ಬಿ.ಎಂ.ಟಿ.ಸಿ. ಕಂಡಕ್ಟರ್ ಚಂದ್ರು ಎಂಬುವರು ಮದುವೆಯಾಗಿದ್ದಾರೆ

- Advertisement -

LEAVE A REPLY

Please enter your comment!
Please enter your name here

Most Popular

Recent Comments