Friday, October 7, 2022
Homeಕರಾವಳಿಮಂಗಳೂರಿನ ಮೇಯರ್‌ ಆಯ್ಕೆ ಚುನಾವಣೆ >> ಅಭ್ಯರ್ಥಿ ಆಯ್ಕೆ ಅಂತಿಮ ಕ್ಷಣದ ಕಸರತ್ತು..!!

ಮಂಗಳೂರಿನ ಮೇಯರ್‌ ಆಯ್ಕೆ ಚುನಾವಣೆ >> ಅಭ್ಯರ್ಥಿ ಆಯ್ಕೆ ಅಂತಿಮ ಕ್ಷಣದ ಕಸರತ್ತು..!!

- Advertisement -
Renault

Renault

Renault

- Advertisement -

ಮಂಗಳೂರುಮಂಗಳೂರಿನ ಮೇಯರ್‌ ಆಯ್ಕೆಗೆ ಇದೇ ಶುಕ್ರವಾರ ಚುನಾವಣೆ ನಡೆಯಲಿದೆ. 23ನೇ ಅವಧಿಯ ಮೇಯರ್ ‌ಸ್ಥಾನವು ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದು, ಈ ಹುದ್ದೆಗೆ ನಾಲ್ವರು ಸದಸ್ಯರ ನಡುವೆ ಪೈಪೋಟಿ ಇದೆ. ಹಾಗಾಗಿ ಮುಂದಿನ ಸಾಲಿನ ಪ್ರಥಮ ಪ್ರಜೆಯ ಆಯ್ಕೆಗೆ ಪಕ್ಷದ ವರಿಷ್ಠರು ಕೊನೆಯ ಕ್ಷಣದವರೆಗೂ ಕಸರತ್ತು ಮುಂದುವರಿಸಿದ್ದಾರೆ.

22ನೇ ಅವಧಿಗೆ ಬಂಟ ಸಮುದಾಯದವರು ಮೇಯರ್‌ ಆಗಿರುವುದರಿಂದ 2022-23ನೇ ಸಾಲಿಗೆ ಬಿಲ್ಲವ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು ಇದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. ಬಿಲ್ಲವರನ್ನೇ ಮೇಯರ್‌ ಮಾಡಲು ಪಕ್ಷದ ವರಿಷ್ಠರು ಮುಂದಾದರೆ ಉತ್ತರ ಕ್ಷೇತ್ರದ ಪದವು ವಾರ್ಡ್‌ನ ಜಯಾನಂದ ಹಾಗೂ ಬಂಗ್ರಕುಳೂರು ವಾರ್ಡ್‌ನ ಕಿರಣ್ ಕೋಡಿಕಲ್ ಅವರಲ್ಲಿ ಒಬ್ಬರಿಗೆ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಿದಾಗ ಸಾರ್ವಜನಿಕ ಸಮಾರಂಭವನ್ನು ಬಂಗ್ರಕೂಳೂರು ವಾರ್ಡ್‌ನಲ್ಲೇ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರುವಂತೆ ಮಾಡಲು ಕಿರಣ್‌ ಹಗಲು ರಾತ್ರಿ ಶ್ರಮಿಸಿದ್ದರು. ಹಾಗಾಗಿ ಅವರಿಗೆ ಹುದ್ದೆ ನೀಡುವ ಅವಕಾಶ ಹೆಚ್ಚು. ಜಯಾನಂದ ಅವರು ಎರಡನೇ ಅವಧಿಗೆ ಪಾಲಿಕೆ ಸದಸ್ಯರಾಗಿದ್ದಾರೆ. ವಿಧಾನ‌ಸಭಾ ಚುನಾವಣೆ ಎದುರಿಸುವ ವರ್ಷವಾಗಿದ್ದರಿಂದ ವರಿಷ್ಠರು ಅನುಭವಕ್ಕೆ ಮಣೆ ಹಾಕಿದರೆ ಜಯಾನಂದ ಅವರಿಗೆ ಅಥವಾ ಸುಧೀರ್‌ ಶೆಟ್ಟಿ ಅವರಿಗೆ ಹುದ್ದೆ ಒಲಿಯಬಹುದು’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಾಲಿಕೆಯ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ 12ಕ್ಕೆ ಪ್ರದೇಶಿಕ ಆಯುಕ್ತರು ಚುನಾವಣೆಯ ಪ್ರಕ್ರಿಯೆ ನಡೆಸಲಿದ್ದಾರೆ.

- Advertisement -


LEAVE A REPLY

Please enter your comment!
Please enter your name here

Most Popular

Recent Comments