Thursday, October 6, 2022
Homeಅಪಘಾತಮಂಗಳೂರು: ರಸ್ತೆ ವಿಭಜಕ್ಕೆ ದ್ವಿಚಕ್ರವಾಹನ ಡಿಕ್ಕಿ - ಸವಾರ ಸಾವು

ಮಂಗಳೂರು: ರಸ್ತೆ ವಿಭಜಕ್ಕೆ ದ್ವಿಚಕ್ರವಾಹನ ಡಿಕ್ಕಿ – ಸವಾರ ಸಾವು

- Advertisement -
Renault

Renault

Renault

- Advertisement -

ಮಂಗಳೂರು: ಕುಂಟಿಕಾನದ ಕೆಎಸ್‌ಆರ್‌ಟಿಸಿ ಡಿಪೊ ಬಳಿ ರಸ್ತೆ ವಿಭಜಕ್ಕೆ ದ್ವಿಚಕ್ರವಾಹನ ಡಿಕ್ಕಿಹೊಡೆದು, ಸವಾರರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಸ್ಥಳೀಯ ನಿವಾಸಿ ಕಾರ್ತಿಕೇಯನ್‌ ಎಂದು ಗುರುತಿಸಲಾಗಿದೆ.

ಕಾರ್ತಿಕೇಯನ್‌ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಭಾನುವಾರ ಮನೆಯಿಂದ ಹೊರಟಿದ್ದರು.

ಕೆಎಸ್‌ಆರ್‌ಟಿಸಿ ಡಿಪೊ ಬಳಿ ಸಾಗುವಾಗ ಆಯತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರು. ಗಾಯಗೊಂಡು ಬಿದ್ದಿದ್ದ ಅವರನ್ನು ಸಾರ್ವಜನಿಕರು ಸಮೀಪದ ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದರು. ಮೃತರ ಬಾವ ಜ್ಞಾನಶೇಖರನ್ ದೂರು ನೀಡಿದ್ದು, ಸಂಚಾರ ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -


LEAVE A REPLY

Please enter your comment!
Please enter your name here

Most Popular

Recent Comments