ನವದೆಹಲಿ: ವಿಶ್ವದ ಆನ್ಲೈನ್ ಮಾರುಕಟ್ಟೆ ದೈತ್ಯ ಸ್ಥಾಪಕ ಜಾಕ್ ಮಾ ಕಳೆದ ಅಕ್ಟೋಬರ್ ಬಳಿಕ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ.

ಜಾಕ್ ನ Ant ಗ್ರೂಪ್ ಮತ್ತು Alibaba ಸಂಸ್ಥೆಗಳ ಮೇಲೆ ಚೀನಾ ಸರ್ಕಾರ ತನಿಖೆ ಆರಂಭಿಸಿದ ಬಳಿಕ ಆತ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದು ಕುತೂಹಲ ಸೃಷ್ಟಿಸಿದೆ. ವಿಶ್ವದಲ್ಲಿಯೇ ದೈತ್ಯ online ಸಂಸ್ಥೆಯಾಗಿ ಆಲಿಬಾಬಾ ವನ್ನು ಬೆಳೆಸಿರುವ Jack Ma, ಚೀನಾದ ಆರ್ಥಿಕ ವ್ಯವಸ್ಥೆಯ ಲೋಪದೋಷಗಳನ್ನು ಸಾರ್ವಜನಿಕವಾಗಿ ಟೀಕಿಸಿದ್ದರು.
ಅವರ ಸರ್ಕಾರದ ವಿರೋಧಿ ಹೇಳಿಕೆ ಇಕ್ಕಟ್ಟಿಗೆ ಸಿಲುಕಿಸಿದ್ದು, ತನಿಖೆ ಮುಗಿಯುವ ವರೆಗೆ ದೇಶ ಬಿಟ್ಟು ಹೊರಹೋಗದಂತೆ ಸೂಚಿಸಲಾಗಿತ್ತು. ಆದರೆ ಈದೀಗ ಜಾಕ್, ಚೀನದಲ್ಲಿಯೇ ಹೊರಬಂದಿಲ್ಲ ಎಂದು ತಿಳಿದುಬರುತ್ತಿದೆ.

ಚೀನಾದಲ್ಲಿ ವಾಕ್ ಸ್ವಾತಂತ್ರದ ಮೇಲೆ ಅಲ್ಲಿನದೇ ಆದ ನಿಯಮಗಳಿದ್ದು, ಜಾಕ್ ಸರಕಾರವನ್ನು ಟೀಕಿಸಿದಾಗ ಅವರು ತನ್ನ ಉದ್ಯಮ ಯಶಸ್ಸಿನ ಉತ್ತುಂಗದಲ್ಲಿ ಸರ್ಕಾರದ ಕಟ್ಟುಪಾಡುಗಳನ್ನು ಮರೆತಿದ್ದರು ಎಂದು ವ್ಯಾಖ್ಯಾನಿಸಲಾಗಿತ್ತು. ಚೀನಾದಲ್ಲಿ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಲು ಸರಕಾರ ಸಮರ್ಪಕವಾಗಿ ಹಣದ ಸಹಾಯ ಮಾಡುವ ಕೆಲಸ ಮಾಡುತ್ತಿಲ್ಲ ಎಂದವರು ಹೇಳಿದ್ದರು.
ಮಂಗಳೂರು ವಾರ್ತೆ