ಮಂಗಳೂರು: ಬೊಕ್ಕಪಟ್ಣ ಸಿಎಸ್ಐ ವಿಶ್ರಾಂತಿ ಚರ್ಚಿಗೆ ಸಂಬಂಧಪಟ್ಟ ಮಣ್ಣಗುಡ್ಡ ವಿಶ್ರಾಂತಿ ಗೋರಿ ಚಾಪೆಲ್ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, 133 ವರ್ಷ ಪುರಾತನವಾದ ವಿಶ್ರಾಂತಿ ಗೋರಿ ಚಾಪೆಲ್ ಅಭಿವೃದ್ಧಿಗೆ ಅಲ್ಪಸಂಖ್ಯಾಕ ಅಭಿವೃದ್ಧಿ ಇಲಾಖೆಯ ವತಿಯಿಂದ 13 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಚರ್ಚಿನ ಧರ್ಮಗುರುಗಳಿಗೆ ಈ ಹಿಂದೆ ಇದರ ಅಭಿವೃದ್ಧಿಯ ಕುರಿತು ಭರವಸೆ ನೀಡಿದ್ದೆ. ಈಗ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುವ ಮುಖೇನ ಅವರಿಗೆ ನೀಡಿದ್ದ ಭರವಸೆ ಈಡೇರಿಸಿದ್ದೇನೆ ಎಂದರು.
ಚರ್ಚಿನ ಧರ್ಮಗುರುಗಳಾದ ರೆವೆ| ವಿಲಿಯಂ ಬಿ. ಕುಂದರ್ ಮಾತನಾಡಿ, ಶಾಸಕ ವೇದವ್ಯಾಸ್ ಕಾಮತ್ ಅವರು ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೋರಿ ಚಾಪೆಲ್ ಅಭಿವೃದ್ಧಿಯ ಕುರಿತು ಭರವಸೆ ನೀಡಿದ್ದರು. ಅಷ್ಟೇ ಅಲ್ಲದೆ ಚರ್ಚಿನ ಅಭಿವೃದ್ಧಿಗೆ ಶಾಸಕರು ವಿಶೇಷ ಅನುದಾನಗಳನ್ನು ಒದಗಿಸಿ ಬಹಳಷ್ಟು ಸಹಕಾರ ನೀಡಿದ್ದಾರೆ. ನಾವೆಲ್ಲರೂ ಅವರ ಶ್ರೇಯಸ್ಸಿಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಸಂಧ್ಯಾ ಮೋಹನ್ ಆಚಾರ್,ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಬೋಳೂರು, ಕಿರಣ್ ಕುಮಾರ್, ಪಾಲಿಕೆ ನಾಮ ನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಮಾಜಿ ಕಾರ್ಪೋರೇಟರ್ ಹೇಮಲತಾ ಪ್ರಭು,ಬಿಜೆಪಿ ಮುಖಂಡರಾದ ವೆಂಕಟೇಶ ಆಚಾರ್,ಮೋಹನ್ ಆಚಾರ್, ವಸಂತ್ ಶೇಟ್, ಶ್ರೀನಿವಾಸ್ ಶೇಟ್, ಮಹೇಶ್ ಕುಂದರ್, ಉಮಾನಾಥ್ ಶೆಟ್ಟಿಗಾರ್, ಪುರುಷೋತ್ತಮ ಪ್ರಭು, ಪ್ರಶಾಂತ್, ಗೋಕುಲ್ ದಾಸ್ ಭಟ್,ಅರ್ಶಾದ್ ಪೋಪಿ, ರೋಷನ್ ರೊನಾಲ್ಡ್, ಮಂಗಲ್ಪಾಡಿ ಗುರುರಾಜ್ ಶೆಣೈ, ಶ್ರೀರಾಮ್ ಪೈ, ಸಿ.ಎಸ್.ಐ. ವಿಶ್ರಾಂತಿ ದೇವಾಲಯದ ಧರ್ಮಗುರುಗಳಾದಂತಹ ರೆವೆ| ವಿಲಿಯಂ ಬಿ. ಕುಂದರ್ ಮತ್ತು ರೆವೆ| ಸಂತೋಷ್ ಕುಮಾರ್ ಮತ್ತು ಸಿ.ಎಸ್.ಐ. ಜೋಶಿಯ ದೇವಾಲಯ ಶಕ್ತಿನಗರ ಇಲ್ಲಿನ ಧರ್ಮಗುರುಗಳಾದ ರೆವೆ| ವಿನ್ಫ್ರೆಡ್ ಅಮನ್ನ ಮತ್ತು
ಸಿ.ಎಸ್.ಐ. ವಿಶ್ರಾಂತಿ ಸಭಾಪರಿಪಾಲನಾ ಸಮಿತಿಯ ಸದಸ್ಯರುಗಳು,
ಪರಿಸರದ ಬಿಜೆಪಿಯ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.