ಕರಾವಳಿಯಲ್ಲಿ ಐಟಿ ದಾಳಿಯ ಮಾಸ್ಟರ್ ಪ್ಲ್ಯಾನ್ ಹೇಗಿತ್ತು ಗೊತ್ತಾ…???
ಉದ್ಯಮಿಗಳ ಬೇಟೆಗೆ ಆಪರೇಷನ್ ಗೌಪ್ಯವಾಗಿರಿಸಲು ಮಾಸ್ಟರ್ ಪ್ಲಾನ್…!!!
ಮಂಗಳೂರು: ಕರಾವಳಿಯ ಪ್ರತಿಷ್ಠಿತ ಉದ್ಯಮಿ ಹಾಗೂ ಅವರ ಒಡೆತನದ ಮೆಡಿಕಲ್ ಕಾಲೇಜು ಮೇಲೆ ಇಂದು ಬೆಳ್ಳಂ ಬೆಳಗ್ಗೆ ಐಟಿ ದಾಳಿ ನಡೆದಿದೆ. ಹೌದು ಈ ಐಟಿ ದಾಳಿಯ ಹಿಂದಿನ ಮಾಸ್ಟರ್ ಪ್ಲ್ಯಾಮ್ ಹೇಗಿತ್ತು ಅಂದ್ರೆ, ಯಾರಿಗೂ ಕೂಡ ಒಂದಿಷ್ಟು ಮಾಹಿತಿನೂ ಸಿಗಲ್ಲ. ಯಸ್ ನಿನ್ನೆ ಸಂಜೆ 60 ಕಾರಗಳನ್ನು ಬಾಡಿಗೆಗೆ ಪಡೆದ ಐಟಿ ಅಧಿಕಾರಿಗಳು ಕೇರಳಕ್ಕೆ ಹೋಗಬೇಕು ಅಂತಾ ಹೇಳಿದ್ರು. ಅಷ್ಟೇ ಅಲ್ದೇ ಇಂಟರ್ ಸ್ಟೇಟ್ ಫುಟ್ಬಾಲ್ ಚಾಂಪಿಯನ್ಶಿಪ್ ಅಂತಾ ಬಾಡಿಗೆ ಕಾರಿನಲ್ಲಿ ಸ್ಟಿಕ್ಕರ್ ಕೂಡ ಅಂಟಿಸಿದ್ರು. ಕಾರಿನಲ್ಲಿ ಫುಟ್ಬಾಲ್ ಆಟಗಾರರು ಬರುತ್ತಾರೆ ಅಂತಾ ಬಾಡಿಗೆ ಪಡೆದವರಲ್ಲಿ ಐಟಿ ಅಧಿಕಾರಿಗಳು ಹೇಳಿದ್ರು. ಇವೆಲ್ಲ ಪ್ಲ್ಯಾನ್ ಗಳನ್ನ ಮಾಡಿ ಇಂದು ಕರಾವಳಿಯ ಉದ್ಯಮಿಗಳ ಬೇಟೆಯಾಡಿದ್ದಾರೆ.