Saturday, September 30, 2023
Homeಕರಾವಳಿಮಿನಿ ವಿಧಾನಸೌಧದಲ್ಲಿನ ಲಿಫ್ಟ್‌ ನೊಳಗೆ ಸಿಲುಕಿಕೊಂಡ ಮೂರು ಮಂದಿಯ ರಕ್ಷಣೆ

ಮಿನಿ ವಿಧಾನಸೌಧದಲ್ಲಿನ ಲಿಫ್ಟ್‌ ನೊಳಗೆ ಸಿಲುಕಿಕೊಂಡ ಮೂರು ಮಂದಿಯ ರಕ್ಷಣೆ

- Advertisement -



Renault

Renault
Renault

- Advertisement -

ಮಂಗಳೂರು : ಮಂಗಳೂರಿನ ಮಿನಿವಿಧಾನಸೌಧದ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ಮಿನಿ ವಿಧಾನಸೌಧದಲ್ಲಿ ಕೆಲಸಕ್ಕೆಂದು ಬಂದಿದ್ದ ಮೂವರು ಲಿಫ್ಟ್ ಹತ್ತಿದ್ದರು. ಹಿರಿಯ ಮಹಿಳೆ ಮತ್ತು ಇಬ್ಬರು ಹಿರಿಯ ಪುರುಷರು ಲಿಫ್ಟ್‌ನಲ್ಲಿ ತೆರಳಿದ್ದರು. ಲಿಫ್ಟ್ ಮೇಲೇರಿದ ಸ್ವಲ್ಪ ಕ್ಷಣದಲ್ಲಿ ನಿಂತುಕೊಂಡಿತ್ತು. ಲಿಫ್ಟ್‌ನಲ್ಲಿ ಮೂವರು ಸಿಲುಕಿಕೊಂಡು ಗಾಬರಿಯಾಗಿದ್ದರು. ಇದರ ಹಿನ್ನೆಲೆಯಲ್ಲಿ ಅಧಿಕಾರಿಗಳು ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಲಿಫ್ಟ್‌ನಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಮಾಹಿತಿ ದೊರಕಿದೆ.

- Advertisement -

2 COMMENTS

  1. ಹೌದಾ..,
    ಅದು ಯಾವಾಗಲೂ ಹಾಗೆನೇ…,
    ನಿಜಾಂಶ ತಿಳಿಸಿ, ಎಲ್ಲರಿಗೂ ಗೊತ್ತಾಗಲಿ.

LEAVE A REPLY

Please enter your comment!
Please enter your name here

Most Popular

Recent Comments