Tuesday, June 6, 2023
Homeರಾಜಕೀಯನಮ್ಮ ಸ್ವಾಭಿಮಾನ ನಮ್ಮದು, ಸಚಿವ ಸುಧಾಕರ್ ದೇವಲೋಕದಿಂದ ಬಂದಿಲ್ಲ: ರೇಣುಕಾಚಾರ್ಯ ಕಿಡಿ

ನಮ್ಮ ಸ್ವಾಭಿಮಾನ ನಮ್ಮದು, ಸಚಿವ ಸುಧಾಕರ್ ದೇವಲೋಕದಿಂದ ಬಂದಿಲ್ಲ: ರೇಣುಕಾಚಾರ್ಯ ಕಿಡಿ

- Advertisement -


Renault

Renault
Renault

- Advertisement -

ಬೆಂಗಳೂರು, ಫೆ.27 : ಅತ್ತ ಕಾಂಗ್ರೆಸ್ ನಲ್ಲಿ ನಾಯಕರ ಮಧ್ಯೆ ಶೀತಲ ಸಮರ ಏರ್ಪಟ್ಟಿರುವಾಗಲೇ ಆಡಳಿತಾರೂಢ ಬಿಜೆಪಿಯಲ್ಲಿ ಸಚಿವರ ಮೇಲಿನ ಅಸಮಾಧಾನ ಸ್ಫೋಟಗೊಂಡಿದೆ. ಮೊದಲಿಂದಲೂ ವಲಸಿಗ ಮತ್ತು ಮೂಲ ಬಿಜೆಪಿಗರ ನಡುವೆ ವೈರುಧ್ಯ ಇತ್ತು‌. ಇದೀಗ ವಲಸಿರಾಗಿ ಬಂದು ಪ್ರಮುಖ ಖಾತೆಯನ್ನು ಗಿಟ್ಟಿಸಿಕೊಂಡಿರುವ ಡಾ.ಸುಧಾಕರ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಯಡಿಯೂರಪ್ಪ ಆಪ್ತ ರೇಣುಕಾಚಾರ್ಯ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. 

ಡಾ.ಕೆ.ಸುಧಾಕರ್ ಆಗಲೀ, ಅವರ ಪಿಎಗಳಾಗಲೀ ಫೋನ್ ಸ್ವೀಕರಿಸುತ್ತಿಲ್ಲ. ಅವರೇನು ದೇವಲೋಕದಿಂದ ಇಳಿದು ಬಂದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಸುಧಾಕರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. 

ಈ ಬಗ್ಗೆ ಮಾತನಾಡಿರುವ ರೇಣುಕಾಚಾರ್ಯ, ತಮ್ಮದೇ ಪಕ್ಷದ ಸಚಿವ ಸುಧಾಕರ್ ನಡೆಯನ್ನು ಖಂಡಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಹೊನ್ನಾಳಿ ಕ್ಷೇತ್ರದ ಕೆಲಸದ ಬಗ್ಗೆ ಡಾ.ಕೆ.ಸುಧಾಕರ್ ಬಳಿ ರೇಣುಕಾಚಾರ್ಯ ತಿಳಿಸಿದ್ದರು. ಆದರೆ, ಇದೇ ವಿಚಾರದಲ್ಲಿ ಪದೇ ಪದೆ ಮನವಿ ಮಾಡಿದರೂ ಸುಧಾಕರ್ ಸ್ಪಂದಿಸಿರಲಿಲ್ಲ. ಸಚಿವ ಡಾ.ಕೆ.ಸುಧಾಕರ್ ಶಾಸಕರ ಕೈಗೇ ಸಿಗುವುದಿಲ್ಲ. ಆದ್ರೆ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ. 

ಕೆಲವು ಸಚಿವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಲೇ ಬೇಕು. ಸಚಿವ ಡಾ.ಕೆ.ಸುಧಾಕರ್ ನನ್ನ ಫೋನ್ ಸ್ವೀಕರಿಸುತ್ತಿಲ್ಲ. ಹಾಗೂ ಸುಧಾಕರ್ ಪಿಎಗಳು ಸಹ ನನ್ನ ಫೋನ್ ಸ್ವೀಕರಿಸುತ್ತಿಲ್ಲ. ಅವರೇನು ದೇವಲೋಕದಿಂದ ಇಳಿದು ಬಂದವರಲ್ಲ ತಾನೇ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಸುಧಾಕರ್​ ತನಗೆ ಎರಡೆರಡು ಖಾತೆ ಕೇಳುವುದಕ್ಕೆ ಆಗುತ್ತೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವುದಕ್ಕೆ ಇವರಿಗೆ ಆಗಲ್ವಾ? ಡಾ.ಕೆ.ಸುಧಾಕರ್ ಒಬ್ಬರಿಂದಲೇ ಈ ಸರ್ಕಾರ ಬಂದಿಲ್ಲ. ಇವರಷ್ಟೇ ಅಲ್ಲ , ಐದರಿಂದ ಆರು ಸಚಿವರು ಶಾಸಕರ ಕೈಗೇ ಸಿಗುತ್ತಿಲ್ಲ. ಇವರೇನು ಬಿಟ್ಟಿ ಗೆದ್ದು ಬಂದಿಲ್ಲವೆಂದು ಸಚಿವರ ವಿರುದ್ಧ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ. 

ನಾನು ಎರಡು ಭಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಪಕ್ಷ ಸಂಘಟನೆಯ ಕೆಲಸ ಮಾಡಿ ಮೂರು ಬಾರಿ ಗೆದ್ದಿದ್ದೇನೆ. ಆದ್ರೆ ಪಕ್ಷಕ್ಕಾಗಿ ಕೆಲವರ ಕೊಡುಗೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ನನಗೆ ಅವಮಾನ ಮಾಡಿದ್ದಾರೆ, ಇದನ್ನು ಖಂಡಿಸುತ್ತೇನೆ ಎಂದು ಆಕ್ರೋಶದಿಂದ ಹೇಳಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments