ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಸಂಚಾಯ ನಿಯಮ ಉಲ್ಲಂಘಿಸಿದ್ದಲ್ಲದೇ ಪೊಲೀಸರಿಗೆ ಅವಾಜ್ ಹಾಕಿದ್ದರು. ಜೊತೆಗೆ ಅಪ್ಪನ ಹೆಸರು ಹೇಳಿಕೊಂಡು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪುತ್ರಿಯ ಬೀದಿ ರಂಪಾಟ ಮಾಧ್ಯಮಗಳಲ್ಲಿ ಬಿತ್ತರ ಆಗ್ತಿದ್ದಂತೆ ಖುದ್ದು ಶಾಸಕರೇ ಮಗಳು ಮಾಡಿದ ಕೆಲಸಕ್ಕೆ ಕ್ಷಮೆ ಯಾಚಿಸಿದ್ದಾರೆ. ಮಗಳ ಬೀದಿ ರಂಪ ಮಾಧ್ಯಮಗಳಲಿ ಬಿತ್ತರ ಆಗ್ತಿದ್ದಂತೆ ಮೊದಲು ಶಾಸಕರು ಕೂಡ ಗರಂ ಆಗಿದ್ದರು. ಇದೊಂದು ಇಶ್ಯುನಾ? ಕಾಮನ್ ಸೆನ್ಸ್ ಇಲ್ವಾ? ಇದನ್ನೆಲ್ಲಾ ವರದಿ ಮಾಡ್ತಿರಾ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು. ಬಳಿಕ ನನ್ನ ಮಗಳ ನಡೆಯಿಂದ ಯಾರಿಗೇ ನೋವಾಗಿದ್ರು ಕ್ಷಮೆ ಕೇಳ್ತೇನೆ ಎಂದು ಅರವಿಂದ ಲಿಂಬಾವಳಿ ಕ್ಷಮೆ ಯಾಚಿಸಿದ್ರು.
ಘಟನೆ ಹಿನ್ನೆಲೆ: ನಿನ್ನೆ ಸಂಜೆ 4.15ರ ಸುಮಾರಿಗೆ ರ್ಯಾಶ್ ಡ್ರೈವಿಂಗ್ ಮಾಡ್ಕೊಂಡು ಬಿಎಂಡಬ್ಲು ಕಾರಿನಲ್ಲಿ ಕ್ವೀನ್ಸ್ ರಸ್ತೆಯ ಮಾರ್ಗವಾಗಿ ಕಾಫಿ ಬೋರ್ಡ್ ಜಂಕ್ಷನ್ ಕಡೆಗೆ ಲಿಂಬಾವಳಿ ಪುತ್ರಿ ಬಂದಿದ್ದಾರೆ. ಈ ವೇಳೆ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ ಕಾರಣ ಪೊಲೀಸರು ಅಡ್ಡ ಹಾಕಿದ್ದು ಆಕೆ ಗಲಾಟೆ ಶುರುಮಾಡಿದ್ದಾಳೆ.
ಕಾರಿನಿಂದ ಇಳಿದ ಕೂಡಲೇ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ನಾನು MLA ಅರವಿಂದ ಲಿಂಬಾವಳಿ ಮಗಳು ಗೊತ್ತಾ? ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಅಲ್ಲದೆ ಇದು MLA ಗಾಡಿ, ನಾನು ಅರವಿಂದ ಲಿಂಬಾವಳಿ ಅವರ ಪುತ್ರಿ ಎಂದು ವಾಗ್ವಾದ ನಡೆಸಿದ್ದಾರೆ. ಬಳಿಕ ಹತ್ತು ಸಾವಿರ ದಂಡ ಕಟ್ಟಿಸಿಕೊಂಡು ಕಾರನ್ನು ಬಿಟ್ಟು, ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಕಳುಹಿಸಿದ್ದಾರೆ.
‘Kings barber is more powerful than the king’ attitude has to change. Police and media did their job correctly. Lesson for all those in power. Keep it up Police & media