Sunday, September 24, 2023
Homeರಾಜಕೀಯಸಿಎಂ ಟೀಕಿಸಿ ಹೋಗಿದ್ದ ಪೊಲೀಸ್ ಭದ್ರತೆ ಮತ್ತೆ ಬಂತು ಯತ್ನಾಳ್ ಗೆ!

ಸಿಎಂ ಟೀಕಿಸಿ ಹೋಗಿದ್ದ ಪೊಲೀಸ್ ಭದ್ರತೆ ಮತ್ತೆ ಬಂತು ಯತ್ನಾಳ್ ಗೆ!

- Advertisement -



Renault

Renault
Renault

- Advertisement -

ವಿಜಯಪುರ: ಸಿ.ಎಂ. ಯಡಿಯೂರಪ್ಪ ಅವರನ್ನು ಟೀಕಿಸಿದ್ದೇನೆಂಬ ರಾಜಕೀಯ ಕಾರಣಕ್ಕೆ ತಮಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಇದೀಗ ಪೊಲೀಸ್ ಇಲಾಖೆ ಭದ್ರತೆಯನ್ನು ಮತ್ತೆ ಆರಂಭಿಸಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದ್ದಾರೆ.

ನಗರದಲ್ಲಿ ಈ ಕುರಿತು ಪತ್ರಕರ್ತರಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ, ನನಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆಯಲಾಗಿತ್ತು.ಕಳೆದ ಎರಡು ದಿನಗಳ ಹಿಂದೆ ಪೊಲೀಸ್ ಭದ್ರತೆಯನ್ನು ಪುನಃ ಆರಂಭಿಸಿದ್ದಾರೆ ಎಂದರು.

ಸಿಎಂ ಪುತ್ರ ಹೇಳಿದ್ದಾನೆ ಎಂದು ಯಾರದೋ ಜೀವ ಬಲಿ ಕೊಡಲು ಒಪ್ಪದ ಪೊಲೀಸ್ ಇಲಾಖೆ ಹಿಂಪಡೆದಿದ್ದ ನನಗೆ ನೀಡಿದ್ದ ಭದ್ರತೆಯನ್ನು ಪುನಾರಂಭಿಸಿದೆ.

ಪೊಲೀಸ್ ಇಲಾಖೆ ಸ್ವತಂತ್ರವಾಗಿ ವಿವಿಐಪಿ ಭದ್ರತೆ ನೀಡುತ್ತದೆ. ರಾಜಕೀಯದ ಒತ್ತಡಕ್ಕೆ ಮಣಿಯದೇ ಪೊಲೀಸ್ ಭದ್ರತೆ ಪುನಃ ನೀಡಿದಕ್ಕೆ ಪೊಲೀಸ್ ಇಲಾಖೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments