Tuesday, September 28, 2021
Homeಕ್ರೈಂತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಬಂದ ಮಗನನ್ನೇ ಕೊಲೆ ಮಾಡಿದ ತಾಯಿ

ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಬಂದ ಮಗನನ್ನೇ ಕೊಲೆ ಮಾಡಿದ ತಾಯಿ

- Advertisement -
Renault
- Advertisement -
Home Plus
- Advertisement -

ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಮಗನನ್ನೇ ಪ್ರಿಯಕರನೊಂದಿಗೆ ಸೇರಿ ತಾಯಿಯೇ ಕೊಲೆ ಮಾಡಿರುವ ಘಟನೆ ಮದನಾ ಗ್ರಾಮದಲ್ಲಿ ನಡೆದಿದೆ. ಸೆಂಟರಿಂಗ್‌ ಕೆಲಸ ಮಾಡಿಕೊಂಡಿದ್ದ ನಾಗೇಶ ರಾಮು ಮದ್ದೂರ್(25) ಕೊಲೆಯಾದವರಾಗಿದ್ದಾರೆ.

ತಾಯಿ, ಪ್ರಿಯಕರ ಹಾಗೂ ತಂಗಿ ಮೂವರು ಸೇರಿ ನಾಗೇಶನನ್ನು ನೇಣು ಬಿಗಿದು ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಿದ್ದರು. ಐದಾರು ವರ್ಷಗಳಿಂದ ಮುನಕನಪಲ್ಲಿಯ ಭರತಕುಮಾರ್ ಶರಣಯ್ಯಸ್ವಾಮಿಯ ಜೊತೆ ಮದನಾ ಗ್ರಾಮದ ಯಲ್ಲಮ್ಮ ರಾಮು ಮದ್ದೂರ ಅಕ್ರಮ ಸಂಬಂಧ ಹೊಂದಿದ್ದಳು. ವಿಷಯ ಯಲ್ಲಮ್ಮನ ಮಗ ನಾಗೇಶನಿಗೆ ತಿಳಿದು ಆಕ್ಷೇಪ ವ್ಯಕ್ತಪಡಿಸಿದಾಗ, ಆತನ ತಂಗಿ ಅನಿತಾ ರಾಮು ಮದ್ದೂರ ಜೊತೆಗೂಡಿ ಮೂರು ಜನ ಸೇರಿ ಹಗ್ಗದಿಂದ ಕುತ್ತಿಗೆ ಬಿಗಿದು ನಾಗೇಶನನ್ನು ಕೊಲೆ ಮಾಡಿದ್ದಾರೆ. ನಂತರ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದಿದ್ದಾರೆ. ಘಟನೆ ಸಂಬಂಧ ತನಿಖೆ ಕೈಗೊಂಡ ಮುಧೋಳ ಪಿಐ ಆನಂದರಾವ್‌ ತಲೆಮರೆಸಿಕೊಂಡಿದ್ದ ಮೂವರು ಕೊಲೆಗಡುಕರನ್ನು ಪತ್ತೆ ಹಚ್ಚಿ ಜೈಲಿಗೆ ಹಾಕಿದ್ದಾರೆ. ಈ ಪ್ರಕರಣವನ್ನು ಮುಧೋಳ ಠಾಣೆಯಲ್ಲಿ ದಾಖಲಿಸಲಾಗಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments