ಮುಂಬೈನಲ್ಲಿ ವ್ಯಾಪಕ ಪ್ರಶಂಸೆ ಪಡೆದ ಶಾಹಿಲ್ ಝಹೀರ್
ಮುಂಬಯಿ: ಪ್ರತಿಷ್ಠಿತ ಎಂಪವರ್ ಡೈರೆಕ್ಟ್ ಸೆಲ್ಲಿಂಗ್ ಬಿಸಿನೆಸ್ ನ ಆರನೇ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಇವೆಂಟ್ ಹೋಸ್ಟ್ ಶಾಹಿಲ್ ಝಹೀರ್ ಅವರನ್ನು ವ್ಯಾಪಕ ಪ್ರಶಂಸೆಯೊಂದಿಗೆ ಸನ್ಮಾನಿಸಲಾಯಿತು.
”ಶಾಹಿಲ್ ಝಹೀರ್ ತನ್ನ ಮಾತಿನಿಂದ ಮೋಡಿಗೊಳಿಸಿ ಸಮಾರಂಭಕ್ಕೆ ಹೆಚ್ಚಿನ ಉಲ್ಲಾಸ ಒದಗಿಸಿದರು” ಎಂದು ಎಂಪವರ್ ಟ್ರೈನಿಂಗ್ ಲಿಮಿಟೆಡ್ ನ ಸ್ಥಾಪಕ ಮತ್ತು ಅಧ್ಯಕ್ಷ ಘನಶ್ಯಾಮ ಕೋಲಂಬೆ ಹೇಳಿದರು.
ಎಲ್ಲರಿಗೂ ಹುರುಪು ತಂದುಕೊಟ್ಟು ಕಾರ್ಯಕ್ರಮವು ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಿದರು,ಎಂದವರು ಸನ್ಮಾನಿಸುತ್ತಾ ಹೇಳಿದರು.
ಶಾಹಿಲ್ ಅವರು ತನ್ನ ವಿಶಿಷ್ಟ ಆಕರ್ಷಕ ಶೈಲಿಯ ಕಾರ್ಯಕ್ರಮ ನಿರೂಪಣೆಯಿಂದ ಭಾರತ ಮಾತ್ರವಲ್ಲದೇ middle-east ನಲ್ಲೂ ಹಲವಾರು ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಸಿಕ್ಕಿದ ಅಪೂರ್ವ ಪ್ರಶಂಸೆಯ ಬಗ್ಗೆ ಪ್ರತಿಕ್ರಿಯಿಸಿದ ಶಾಹಿಲ್, “ಪ್ರತಿಯೊಂದು ಕಾರ್ಯಕ್ರಮವನ್ನೂ ತನ್ನದೇ ಕಾರ್ಯಕ್ರಮ ಎಂದು ಭಾವಿಸುತ್ತೇನೆ. ಆತ್ಮೀಯ ಪ್ರಶಂಸೆ ನನ್ನನ್ನು ಇನ್ನಷ್ಟು ಒಳ್ಳೆಯ ಕಾರ್ಯಕ್ರಮ ನಡೆಸಿಕೊಡಲು ಪ್ರೋತ್ಸಾಹ ನೀಡುತ್ತದೆ. ಜನರ ಆಶೀರ್ವಾದದಿಂದಲೇ ನನ್ನ ಪ್ರತಿಯೊಂದು ವೇದಿಕೆಯೂ exclusive ಆಗಿರುತ್ತದೆ” ಎಂದರು.