Tuesday, September 28, 2021
Homeಕರಾವಳಿಯುವಕನ ತಲೆಗೆ ಮಾರಕಾಸ್ತ್ರದಿಂದ ಹೊಡೆದು ಕೊಲೆಮಾಡಿ ಆರೋಪಿ ಪರಾರಿ…ಸಂಬಂಧಿಯಾದ ಸ್ವಂತ ಅತ್ತೆ ಮಗನಿಂದಲೇ ಈ ಕುಕೃತ್ಯ…?

ಯುವಕನ ತಲೆಗೆ ಮಾರಕಾಸ್ತ್ರದಿಂದ ಹೊಡೆದು ಕೊಲೆಮಾಡಿ ಆರೋಪಿ ಪರಾರಿ…ಸಂಬಂಧಿಯಾದ ಸ್ವಂತ ಅತ್ತೆ ಮಗನಿಂದಲೇ ಈ ಕುಕೃತ್ಯ…?

- Advertisement -
Renault
- Advertisement -
Home Plus
- Advertisement -

ಬಂಟ್ವಾಳ : ಸಂಬಂಧಿಯೇ ಯುವಕನೋರ್ವನನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಕಕ್ಕೆಪದವಿಲ್ಲಿ ನಡೆದಿದೆ. ರಫೀಕ್ (26) ಕೊಲೆಯಾದ ಯುವಕನಾಗಿದ್ದಾನೆ. ಈತ ಬೆಳ್ತಂಗಡಿ ತಾಲೂಕಿನ ಪಾಂಡವರಕಲ್ಲು ನಿವಾಸಿಯಾಗಿದ್ದಾನೆ

ಕೊಡ್ಯಮಲೆಯ ನಿರ್ಜನ ಪ್ರದೇಶದಲ್ಲಿ ರಫೀಕ್ ಮೃತದೇಹ ಪತ್ತೆಯಾಗಿದೆ. ರಫೀಕ್‍ ಸಂಬಂಧಿ ಕಕ್ಕೆಪದವು ನಿವಾಸಿ ಸಿದ್ಧೀಕ್ ಕೊಲೆ ಆರೋಪಿ ಎಂಬ ಸಂಶಯವನ್ನು ವ್ಯಕ್ತಪಡಿಸಲಾಗುತ್ತಿದ್ದು, ವೈಯುಕ್ತಿಕ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮರದ ತುಂಡು ಅಥವಾ ಹರಿತವಾದ ಆಯುಧವೊಂದರಿಂದ ಈತನನ್ನು ಹೊಡೆದು ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಆರೋಪಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್, ಪುಂಜಾಲಕಟ್ಟೆ ಠಾಣಾ ಎಸ್ ಐ ಸೌಮ್ಯ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments