Wednesday, May 31, 2023
HomeUncategorized30ಸಾವಿರ ಸಾಲ ತೀರಿಸಲು ವೃದ್ಧನ ಕೊಲೆ ಮಾಡಿದ ಕೋಟ್ಯಧಿಪತಿಯ ಮಗ!

30ಸಾವಿರ ಸಾಲ ತೀರಿಸಲು ವೃದ್ಧನ ಕೊಲೆ ಮಾಡಿದ ಕೋಟ್ಯಧಿಪತಿಯ ಮಗ!

- Advertisement -


Renault

Renault
Renault

- Advertisement -

30000 ರೂಪಾಯಿ ಸಾಲ ತೀರಿಸಲು 22 ವರ್ಷದ ಯುವಕ 65 ವರ್ಷದ ವೃದ್ಧನನ್ನ ಕೊಲೆ ಮಾಡಿ ಜೈಲು ಸೇರಿದ ಘಟನೆ ಬೆಂಗಳೂರಿನ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಆರೋಪಿ ರಾಕೇಶ್​ ವೃದ್ಧನಿಗೆ ಬ್ಯಾಟ್​ನಿಂದ ಥಳಿಸಿ ಕೊಲೆ ಮಾಡಿದ್ದಾನೆ.

ಪೊಲೀಸರು ಆರೋಪಿ ರಾಕೇಶ್​ನನ್ನ ಸೋಮವಾರ ಬಂಧಿಸಿದ್ದಾರೆ. ಹಾಗೂ ಆತ ವೃದ್ಧನ ಕೈಯಿಂದ ಕಸಿದುಕೊಂಡು ಹೋಗಿದ್ದ ಎಲ್ಲಾ ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ. ರಾಕೇಶ್​​ ಶ್ರೀಮಂತ ಮನೆತನದ ಯುವಕನಾಗಿದ್ದು ಆತನ ತಂದೆ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದರು ಎನ್ನಲಾಗಿದೆ.

ಜನವರಿ 15ರಂದು ಈ ಘಟನೆ ಸಂಭವಿಸಿದ್ದು ಮೃತ ಮೂರ್ತಿಯನ್ನ ಹಿಂಬದಿಯಿಂದ ಬಂದು ದಾಳಿ ನಡೆಸಿದ ರಾಕೇಶ್​ ಬ್ಯಾಟ್​ನಿಂದ ಥಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಮೃತ ಮೂರ್ತಿಯ ಕುತ್ತಿಗೆಯಲ್ಲಿದೆ ಚಿನ್ನಾಭರಣಗಳನ್ನ ಕಸಿದುಕೊಂಡಿದ್ದ.

ಬಳಿಕ ಮೂರ್ತಿಯ ಮೃತದೇಹವನ್ನ ಪೊದೆಗಳ ನಡುವೆ ಎಸೆದು ಸ್ಥಳದಿಂದ ಪರಾರಿಯಾಗಿದ್ದ . ವೃದ್ಧ ಮೂರ್ತಿ ಮನೆಗೆ ವಾಪಸ್ಸಾಗದ್ದನ್ನ ಕಂಡ ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳನ್ನ ಆಧರಿಸಿದ ಪೊಲೀಸರು ರಾಕೇಶ್​ನನ್ನ ವಿಚಾರಣೆಗೆ ಕರೆದಿದ್ದಾರೆ. ಈ ವೇಳೆ ಆತ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದು ಪೊಲೀಸರು ಆತನನ್ನ ಬಂಧಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments