Sunday, September 24, 2023
HomeರಾಜಕೀಯVideo:ಪಂಚಮಸಾಲಿ ಶ್ರೀ, ಯತ್ನಾಳ್ ಮೇಲೆ ಮುರುಗೇಶ್ ನಿರಾಣಿ ಗಂಭೀರ ಆರೋಪ…!!!

Video:ಪಂಚಮಸಾಲಿ ಶ್ರೀ, ಯತ್ನಾಳ್ ಮೇಲೆ ಮುರುಗೇಶ್ ನಿರಾಣಿ ಗಂಭೀರ ಆರೋಪ…!!!

- Advertisement -



Renault

Renault
Renault

- Advertisement -

ಪಂಚಮಸಾಲಿ ಶ್ರೀ, ಯತ್ನಾಳ್ ಮೇಲೆ ಮುರುಗೇಶ್ ನಿರಾಣಿ ಗಂಭೀರ ಆರೋಪ…!!!

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ಇದೀಗ ರಾಜಕೀಯ ಬಣ್ಣ ಬಳಿಯಲಾಗಿದೆ. ಕಳೆದ ಜನವರಿ 14 ರಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆರಂಭಿಸಿದ್ದ ಪಾದಯಾತ್ರೆ ಕಾಂಗ್ರೆಸ್ ಪ್ರೇರಿತ ಎಂದು ಸಚಿವ ಮುರುಗೇಶ್ ನಿರಾಣಿ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಮೀಸಲಾತಿ ಹೋರಾಟದ ಕುರಿತು ಸಚಿವ ಸಿ.ಸಿ. ಪಾಟೀಲ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಸಚಿವ ನಿರಾಣಿ ಅವರು ಮಾತನಾಡಿದ್ದಾರೆ.

ನಿನ್ನೆ ಅರಮನೆ ಮೈದಾನದಲ್ಲಿ ನಡೆದ ಪಂಚಮಸಾಲಿ ಸಮಾವೇಶ ಕಾಂಗ್ರೆಸ್ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅಬರ ಕುಟುಂಬದ ಕಾರ್ಯಕ್ರಮದಂತೆ ಇತ್ತು ಎಂದು ನಿರಾಣಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ಬಿ ಟೀಂ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

ಪಂಚಮಸಾಲಿ ಸಚಿವರಿಗೆ ಬಿಟ್ಟ ವಿಚಾರ

ಕೇಳಿದ ತಕ್ಷಣ ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಸಚಿವರ ಮೂಲಕ ವಿಧಾನಸೌಧದಲ್ಲಿ ಸ್ಪಷ್ಟನೆ ಕೊಡಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2ಎ ಮೀಸಲಾತಿಯನ್ನು ಕೊಡಲು ಆಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ತಾವು ಮಾತನಾಡುವುದಿಲ್ಲ. ಆ ಸಮುದಾಯದ ಸಚಿವರೇ (ಮುರುಗೇಶ್ ನಿರಾಣಿ ಹಾಗೂ ಸಿ.ಸಿ. ಪಾಟೀಲ್) ಮಾತನಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಹೇಳಿಕೆ ಕೊಟ್ಟಿದ್ದರು.

ಸ್ವಾಮೀಜಿ, ಯತ್ನಾಳ್ ಮೇಲೆ ವಾಗ್ದಾಳಿ

ಅದಾದ ಬಳಿಕ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುರುಗೇಶ್ ನಿರಾಣಿ ಅವರು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಅವರ ಮೇಲೆ ಏಕವಚದಲ್ಲಿ ವಾಗ್ದಾಳಿ ನಡೆಸಿದರು. ಜೊತೆಗೆ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಮೇಲೂ ವಾಗ್ದಾಳಿ ನಡೆಸಿದ್ದಾರೆ. ಸುಮಾರು 700 ಕಿಮೀ ಪಾದಯಾತ್ರೆಯನ್ನು ಮಾಡಿದ್ದೀರಿ. ನಿಮ್ಮ ಹಿಂದೆ ನಮ್ಮ ಸರ್ಕಾರವಿದೆ. ಆದರೆ 80 ಲಕ್ಷ ಪಂಚಮಸಾಲಿ ಸಮುದಾಯದ ಜನರು ನಿಮಗೆ ಪವರ್ ಆಫ್ ಅಟಾರ್ನಿ ಬರೆದುಕೊಟ್ಟಿಲ್ಲ ಎಂದು ಸಚಿವರ ಮುರುಗೇಶ್ ನಿರಾಣಿ ಅವರು ಪಂಚಮಸಾಲಿ ಶ್ರೀಗಳನ್ನೂ ಟೀಕಿಸಿದ್ದಾರೆ.

ಯತ್ನಾಳ್ ಮೇಲೆ ಏಕವಚನದಲ್ಲಿ ವಾಗ್ದಾಳಿ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಸಚಿವ ಮುರುಗೇಶ್ ನಿರಾಣಿ ಅವರು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸಂಘ ಪರಿವಾರ, ನಾಯಕರಿಂದ ನೀನು ಶಾಸಕನಾಗಿದ್ದೀಯ. ನೀನು ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡು. ಆ ನಂತರ ಸ್ವಂತ ಶಕ್ತಿಯ ಮೇಲೆ ಗೆದ್ದು ಬಾ. ನೀನು ಯಾರ್ಯಾರ ಕಾಲಿಗೆ ಬಿದ್ದಿದ್ದಿಯಾ ಎಂಬುದು ಗೊತ್ತಿದೆ. ಸಿಎಂ ಯಡಿಯೂರಪ್ಪ ಅವರ ಆಶೀರ್ವಾದ ಇಲ್ಲದೆ ಗೆದ್ದು ಬಾ. ಶಾಸಕನಾಗಿ ನೀನು ಆರಿಸಿ ಬಾ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದ್ದಾರೆ.

ಪಂಚಮಸಾಲಿಯಷ್ಟೇ 2ಎಗೆ ಸೇರಿಸುವುದಲ್ಲ

ಇದೇ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಹೇಳಿಕೆಯನ್ನು ಸಚಿವ ನಿರಾಣಿ ಅವರು ಕೊಟ್ಟಿದ್ದಾರೆ. ಕೇವಲ ಪಂಚಮಸಾಲಿ ಸಮುದಾಯವನ್ನು ಮಾತ್ರ 2ಎ ಮೀಸಲಾತಿ ಪಟ್ಟಿಗೆ ಸೇರಿಸುವುದಲ್ಲ. ಸಮಸ್ತ ವೀರಶೈವ ಲಿಂಗಾಯತರನ್ನು ಆ ಮೀಸಲಾತಿ ಪಟ್ಟಿಗೆ ಸೇರಿಸಬೇಕಿದೆ. ನಮ್ಮದು ರೈತಾಪಿ ಸಮುದಾಯ. ರಾಜಕೀಯ ಮೀಸಲಾತಿಯನ್ನು ಕೇಳುತ್ತಿಲ್ಲ. ಕೇವಲ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಮೀಸಲಾತಿ ಕೇಳಿದ್ದಾರೆ. ಪಂಚಮಸಾಲಿ ಶ್ರೀಗಳು ಬೇರೆಯವರ ಮಾತಿನಂತೆ ನಡೆಯಬಾರದು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗು ವಿಜಯಾನಂದ ಕಾಶಪ್ಪನವರ ಮಾತಿನಂತೆ ನಡೆಯಬಾರದು.

ವಿಜಯಾನಂದ ಕಾಶಪ್ಪನವರ್ ಮೇಲೆ ವಾಗ್ದಾಳಿ

ಹಿಂದೆ ನಿಮ್ಮ ತಂದೆಯೇ ಶಾಸಕರಾಗಿದ್ದರು, ಸಚಿವರಾಗಿದ್ದರು. ನಿಮ್ಮ ತಾಯಿ, ನೀನು ಶಾಸಕನಾಗಿದ್ದೆ. ಅಂದು ನೀನ್ಯಾಕೆ ಮೀಸಲಾತಿ ಬಗ್ಗೆ ಒತ್ತಡ ತರಲಿಲ್ಲ? ಬಾರುಕೋಲ್ ಹಿಡ್ಕೊಂಡು ಹೋಗಲಿಲ್ಲ? ಎಂದು ಸಚಿವ ಮುರುಗೇಶ್ ನಿರಾಣಿ ಅವರು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ಗೆ ನಿರಾಣಿ ತಿರುಗೇಟು ನೀಡಿದ್ದಾರೆ.

ಜೊತೆಗೆ ಮತ್ತೊಂದು ಮಹತ್ವದ ಪ್ರಶ್ನೆಯನ್ನು ನಿರಾಣಿ ಅವರು ಎತ್ತಿದ್ದಾರೆ. ಅಷ್ಟೊಂದು ಬೃಹತ್ ಸಮಾವೇಶಕ್ಕೆ ಹಣ ಎಲ್ಲಿಂದ ಬಂತು? ಇದರ ಬಗ್ಗೆ ಗೊತ್ತಾಗಬೇಕು. ನೀವು ರಾಷ್ಟ್ರೀಯ ಅಧ್ಯಕ್ಷ ಅಂತ ಘೋಷಣೆ ಮಾಡಿಕೊಂಡಿದ್ದೀರಿ. ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿದ್ದೀರಿ. ನಾವು 15 ಮಂದಿ ಪಂಚಮಸಾಲಿ ಶಾಸಕರಿದ್ದೇವೆ. ನಮ್ಮನ್ನು ಎಲ್ಲಾದರೂ ಕೇಳಿದ್ದೀರ? ಮೊನ್ನೆ ನಿಮ್ಮ‌ ಮೇಲೆ ಎಫ್ಐಆರ್ ಆಗಿದೆ. ಹುನಗುಂದದಲ್ಲಿ ಎಫ್ಐಆರ್ ಆಗಿದೆ. ಹಿಂದೆ ಬೆಂಗಳೂರಿನಲ್ಲೂ ದೂರು ದಾಖಲಾಗಿತ್ತು. ನಿಮ್ಮ ಮೇಲೆ ಎಫ್ಐಆರ್ ಆಗಿದ್ದರೂ ಅಧ್ಯಕ್ಷರಾಗಿದ್ದೀರ ಎಂದು ಕಾಶಪ್ಪ ವಿರುದ್ಧ ಮುರುಗೇಶ್ ನಿರಾಣಿ ವಾಗ್ದಾಳಿ ಮಾಡಿದ್ದಾರೆ.

ಯತ್ನಾಳ್ ಮೇಲೆ ಪಾಟೀಲ್ ವಾಗ್ದಾಳಿ

ಶಾಸಕ ಯತ್ನಾಳ್ ಪದೇ ಪದೇ ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬಸ್ಥರ ವಿರುದ್ಧ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ನಿನ್ನೆ ಕೂಡ ಬಿ.ವೈ. ವಿಜಯೇಂದ್ರ ಮೇಲೆ ಆರೋಪ ಮಾಡಿದ್ದಾರೆ. ಅವರು ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ. ಸಿಎಂ ಸಮಿತಿಯನ್ನು ರಚನೆ ಮಾಡಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಕಮಿಟಿ‌ರ ಚನೆಯಾಗಲಿದೆ. ಮೀಸಲಾತಿ ಸಂಬಂಧಿಸಿದಂತೆ ಕಮಿಟಿ ತೀರ್ಮಾನಿಸುತ್ತದೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಜೊತೆಗೆ ಪಂಚಮಸಾಲಿ ಶ್ರೀಗಳು ಧರಣಿ ಸತ್ಯಾಗ್ರಹ ಮಾಡಬಾರದು ಎಂದು ಸಿಸಿ ಪಾಟೀಲ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಸ್ವಾಮೀಜಿ ಧರಣಿಯನ್ನು ಕೈಬಿಡಬೇಕು. ಸರ್ಕಾರಕ್ಕೆ ಸಮಯಾವಕಾಶ ನೀಡಬೇಕು. ಒಬಿಸಿ ಆಯೋಗಕ್ಕೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಆಯೋಗ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕು. ನಂತರ ಅದನ್ನು ಸರ್ಕಾರ ಒಪ್ಪಬೇಕು. ಕೇಂದ್ರಕ್ಕೆ ಕಳಿಸಿಕೊಡಬೇಕು. ಇಷ್ಟೆಲ್ಲ ಇದ್ದರೂ ಕೆಲವರು ಹೋರಾಟವನ್ನು ಸ್ವಾರ್ಥಕ್ಕಾಗಿ‌ ಬಳಸಿಕೊಳ್ಳುತ್ತಿದ್ದಾರೆ. ಸಮಾಜದ ಮುಂದೆ ಯಾರು ದೊಡ್ಡವರಲ್ಲ. ಸಮಾಜ‌ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಮಾಜಿ ಶಾಸಕ ಕಾಶಪ್ಪನವರ್ ಅವರು ಜಯಮೃತ್ಯುಂಜಯ ಶ್ರೀಗಳನ್ನು ಹಿಡಿತದಲ್ಲಿಟ್ಟು ಕೊಂಡಿದ್ದಾರೆ. ತಾನೇ ಸಮಾಜದ ಅಧ್ಯಕ್ಷ ಅಂತ ಘೋಷಿಸಿಕೊಂಡಿದ್ದಾರೆ ಎಂದು ವಿಜಯಾನಂದ ಕಾಶಪ್ಪನವರ್ ವಿರುದ್ಧ ಸಿ.ಸಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments