ಬೆಂಗಳೂರು: ರಾಜ್ಯ ಗಣಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ದಿಲ್ಲಿಗೆ ಕರೆಸಿದ್ದು, ನಿರಾಣಿ ತನ್ನ ಮೈಸೂರು ಪ್ರವಾಸವನ್ನು ಮೊಟಕುಗೊಳಿಸಿ ದಿಲ್ಲಿಗೆ ದೌಡಾಯಿಸಿದ್ದಾರೆ.
ಮುರುಗೇಶ್ ನಿರಾಣಿ ಅವರು ಅವರು ಇಂದು ಮೈಸೂರು ಪ್ರವಾಸದ ಯೋಜನೆ ಮಾಡಿಕೊಂಡಿದ್ದರು. ಆದರೆ ಅಮಿತ್ ಶಾ ಕರೆಯ ಬೆನ್ನಲ್ಲೇ ಪ್ರವಾಸ ಮೊಟಕುಗೊಳಿಸಿ ದಿಲ್ಲಿ ವಿಮಾನ ಏರಿದ್ದಾರೆ.
ಮೈಸೂರು ಪ್ರವಾಸ ಮುಗಿಸಿ ಸಂಜೆ ದಿಲ್ಲಿಗೆ ಬರುತ್ತೇನೆ ಎಂದು ನಿರಾಣಿ ಹೇಳಿದರೂ ಬೆಳಗ್ಗೆ ಬರುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಶಾ ಖುದ್ದು ಮುರುಗೇಶ್ ನಿರಾಣಿ ಜೊತೆ ಚರ್ಚೆನಡೆಸಲಿದ್ದಾರೆ.
ಹೀಗಾಗಿ ಈ ಭೇಟಿ ರಾಜ್ಯ ಬಿಜೆಪಿ ನಾಯಕರ ಕುತೂಹಲಕ್ಕೆ ಕಾರಣವಾಗಿದೆ.
ಪಂಚಮಸಾಲಿ ಹೋರಾಟ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಿಲ್ಲಿ ಭೇಟಿ ಹಿನ್ನಲೆಯಲ್ಲಿ ಇದೀಗ ನಿರಾಣಿ ಭೇಟಿ ಹಲವು ರಾಜಕೀಯ ಲೆಕ್ಕಾಚಾರಗಳು ಕಾರಣವಾಗಿದೆ.