Wednesday, September 28, 2022
Homeಕ್ರೈಂಮುರುಘಾಶ್ರೀ ವಿರುದ್ದ ಲೈಂಗಿಕ ದ್ವರ್ಜನ್ಯ ಪ್ರಕರಣ: 5ನೇ ಆರೋಪಿ ಗಂಗಾಧರಯ್ಯ ಬಂಧನ

ಮುರುಘಾಶ್ರೀ ವಿರುದ್ದ ಲೈಂಗಿಕ ದ್ವರ್ಜನ್ಯ ಪ್ರಕರಣ: 5ನೇ ಆರೋಪಿ ಗಂಗಾಧರಯ್ಯ ಬಂಧನ

- Advertisement -
Renault

Renault

Renault

Renault


- Advertisement -

ಚಿತ್ರದುರ್ಗಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಬಂಧನಕ್ಕೀಡಾಗಿರುವ ಮುರಾಘಾ ಮಠದ ಶಿವಮೂರ್ತಿ ಮುರುಘಾ ಶ್ರೀಗಳ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ 5ನೇ ಪ್ರಮುಖ ಆರೋಪಿಯಾಗಿರುವ ವಕೀಲ ಗಂಗಾಧರಯ್ಯ ಮಂಗಳವಾರ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದ್ದು, ಚಿತ್ರದುರ್ಗದ ಡಿವೈಎಸ್​ಪಿ ಕಚೇರಿಯಲ್ಲಿ ಗಂಗಾಧರಯ್ಯ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.

ಪ್ರಕರಣದ 3ನೇ ಆರೋಪಿಯಾಗಿರುವ ಮಠದ ಉತ್ತರಾಧಿಕಾರಿ ಮತ್ತು 4ನೇ ಆರೋಪಿ ಪರಮಶಿವಯ್ಯ ಮತ್ತು 3ನೇ ಆರೋಪಿ ಬಸವಾಧಿತ್ಯ ಈವರೆಗೆ ಪೊಲೀಸರಿಗೆ ಸಿಕ್ಕಿಲ್ಲ. ಅವರ ಬಂಧನಕ್ಕಾಗಿ ಹುಡುಕಾಟ ಮುಂದುವರಿದಿದೆ.

ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣದ 2ನೇ ಆರೋಪಿ ಲೇಡಿ ವಾರ್ಡನ್ ರಶ್ಮಿಯನ್ನು ವಿಚಾರಣೆಗಾಗಿ ತಮ್ಮ 7 ದಿನ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ಕೇಳಿದ್ದಾರೆ. ಸದ್ಯ ಈಕೆ ಶಿವಮೊಗ್ಗ ಕಾರಾಗೃಹದಲ್ಲಿ ನ್ಯಾಯಾಂಗ‌ ಬಂಧನದಲ್ಲಿದ್ದಾರೆ. ಇಂದು ಈ ಸಂಬಂಧ ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಲಯದಿಂದ ಪೊಲೀಸರಿಗೆ ಸೂಚನೆ ಸಿಗುವ ಸಾಧ್ಯತೆಯಿದೆ. ಡಿವೈಎಸ್​ ಅನಿಲ್ ಕುಮಾರ್ ನೇತೃತ್ವದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments