ಮೈಸೂರು : ಯುವಕರಿಬ್ಬರನ್ನು ಜನನಿಬಿಡ ಪ್ರದೇಶದಲ್ಲಿಯೇ ಪಾತಕಿಗಳು ಮಾರಕಾಸ್ತ್ರಗಳಿಂದ ಬರ್ಭರವಾಗಿ ಕೊಲೆಗೈದಿರುವ ಘಟನೆ ಮೈಸೂರಿನ ಎಲೆತೋಟದ ಬಳಿಯಲ್ಲಿ ನಡೆದಿದೆ.
ಮೈಸೂರಿನ ಗೌರಿಶಂಕರ ನಗರದ ನಿವಾಸಿ ಕಿಶನ್ (29 ವರ್ಷ) ಹಾಗೂ ಕಿರಣ್ (29 ವರ್ಷ) ಹತ್ಯೆಯಾದ ದುರ್ವೈವಿಗಳು. ಇನ್ನು ಘಟನೆಯಲ್ಲಿ ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ಡಾ.ಎನ್.ಪ್ರಕಾಶ್ ಗೌಡ, ಎಸಿಪಿ ಪೂರ್ಣಚಂದ್ರ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಘಟನೆಯಿಂದಾಗಿ ಮೈಸೂರು ಜನತೆ ಬೆಚ್ಚಿಬಿದ್ದಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪ್ರಕರಣದ ದಾಖಲು ಮಾಡಿಕೊಂಡಿರುವ ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಯ ಪೊಲೀಸರು ಪಾತಕಿಗಳಿಗಾಗಿ ಬಲೆ ಬೀಸಿದ್ದಾರೆ.