- Advertisement -
ಮಂಗಳೂರು : SDPI ಮುಖಂಡ ರಿಯಾಜ್ ಫರಂಗಿಪೇಟೆ ಹೇಳಿದ್ದರೆನ್ನಲಾದ ‘ನೀ ತಾಂ ಟ್ರೇ ಬಾ ತಾಂಟ್ ‘ ಹೇಳಿಕೆ ಇದೀಗ ಭಾರೀ ಆಯಾಮ ಪಡೆದು ಕೊಂಡು ಟ್ರೋಲ್ ಆಗುತ್ತಿದೆ.ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವುದು ಒಂದೆಡೆಯಾದರೆ ಯಕ್ಷಗಾನದಲ್ಲಿಯೂ ಹಾಸ್ಯಕ್ಕಾಗಿ ಬಳಸಲಾಗುತ್ತಿದೆ.ವಾಟ್ಸಪ್ ಗ್ರೂಪ್ ಗಳಲ್ಲಿ ಸಾಕಷ್ಟು ರೀತಿಯಲ್ಲಿ ಅವರವರ ಅಭಿರುಚಿಗೆ ತಕ್ಕಂತೆ ಟ್ರೋಲ್ ಆಗುತ್ತಿದೆ. ವಿಶೇಷ ಎಂದರೆ ಈ ಹೇಳಿಕೆಯನ್ನು SDPI ಚಾಲೆಂಜ್ ಎಂದೇ ಸ್ವೀಕರಿಸಿದಂತಿದೆ.ಈ ಹಿಂದೆ, ನಿಖಿಲ್ ಎಲ್ಲಿದ್ದೀಯಪ್ಪಾ, ಹುಲಿಯಾ, ಕೊತ್ತಿಮಿರಿ ಸೊಪ್ಪು,ಮುಂತಾದ ಹೇಳಿಕೆಗಳು ಭಾರೀ ಟ್ರೋಲ್ ಆಗಿದ್ದವು. ಇದೆಲ್ಲಾ ತಿಳಿಹಾಸ್ಯಕ್ಕೆ ಸೀಮಿತ ಆಗಿದ್ದರೆ, ಈ ಬಾರಿ ಒಂದಿಷ್ಟು ಗಂಭೀರವಾಗಿಯೇ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.