Tuesday, September 28, 2021
Homeಕ್ರೀಡೆಒಲಂಪಿಕ್ ಚಿನ್ನದ ಬೇಟೆ ಮಾಡಿದ ನೀರಜ್ ತನ್ನ ಗುರುವಿನ ಮನೆಗೆ ಕೊಟ್ಟರು ಭೇಟಿ

ಒಲಂಪಿಕ್ ಚಿನ್ನದ ಬೇಟೆ ಮಾಡಿದ ನೀರಜ್ ತನ್ನ ಗುರುವಿನ ಮನೆಗೆ ಕೊಟ್ಟರು ಭೇಟಿ

- Advertisement -
Renault
- Advertisement -
Home Plus
- Advertisement -

ನೀರಜ್ ಛೋಪ್ರಾ ರವರ ಗುರುವಾಗಿ ಮಾರ್ಗದರ್ಶನ ಮಾಡಿದ್ದ ಶಿರಸಿ ಬೆಂಗಳೆಯ ಯುವಕ, ಭಾರತೀಯ ಸೈನ್ಯದ ಸುಭೇದಾರ ಕಾಶೀನಾಥ ನಾಯ್ಕ್ ರವರ ಪೂನಾದ ಮನೆಗೆ ಭೇಟಿ ಕೊಟ್ಟು ತಾಸುಗಳಿಗೂ ಅಧಿಕ ಕಾಲ ಮಾತನಾಡಿ, ಸಿಹಿತಿಂದು ಹೋಗುವ ಮೂಲಕ ಗುರುವೇ ಅಲ್ಲ ಕಾಶಿನಾಥ ಎಂದ ಅನೇಕರ ಪ್ರಶ್ನೆಗೆ ಸ್ವತಃ ಛೋಪ್ರಾ ಮಾತಿಲ್ಲದ ಉತ್ತರ ನೀಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಬಂದ ಬಳಿಕ ಒತ್ತಡದ ಹೊತ್ತಿನಲ್ಲೂ ಕಾಶಿನಾಥ್ ಮನೆಗೆ ಛೋಪ್ರಾ ಬಂದು ಬೇಟಿಯಾದರು. ಕಾಶೀನಾಥ ಅವರ ಪತ್ನಿ ಚೈತ್ರಾ ನಾಯ್ಕ್ ಇಂದು ಮಧ್ಯಾಹ್ನ ಪೂನಾದ ಮನೆಗೆ ಬಂದಾಗ ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಕಾಶೀನಾಥ್ ರವರ ಮಕ್ಕಳಾದ ದಕ್ಷ, ಲಕ್ಷರ ಜೊತೆಗೂ ಫೋಟೊ ತೆಗಸಿಕೊಂಡರು. ಮನೆಯ ಸಾಕು ನಾಯಿ ರಾಕಿಯ ಜೊತೆಗೂ ಫೊಟೊ ತೆಗಸಿಕೊಂಡರು. ಭಾರತೀಯ ಅಥ್ಲೆಟಿಕ್ಸ್ ಅಸೋಶಿಯೇಶನ್ ಅಧ್ಯಕ್ಷರು ಕಾಶಿನಾಥ್ ಯಾರೆಂದು ಗೊತ್ತೇ ಇಲ್ಲ, ಕೋಚ್ ಅಲ್ಲ ಅವರು ಎಂದು ಹೇಳಿದಾಗ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ಷೇಪ, ಅಸಮಧಾನಗಳು ವ್ಯಕ್ತವಾಗಿದ್ದವು.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments