Friday, May 14, 2021
Homeಸಿನಿಮಾ'ಆಳ್ಶಿ ರೆಡೆ' ಸಿದ್ದವಾಗಿದೆ ವಿಭಿನ್ನ ಚಿತ್ರ

‘ಆಳ್ಶಿ ರೆಡೆ’ ಸಿದ್ದವಾಗಿದೆ ವಿಭಿನ್ನ ಚಿತ್ರ

- Advertisement -
Rental
Rental
- Advertisement -Home Plus
- Advertisement -
Platform
Maya Builders

ಉಡುಪಿ: ಕೊಂಕಣಿ ಭಾಷಾ ಸಿನಿಮಾ ಪ್ರಿಯರಿಗೆ ಒಂದು ವಿಶಿಷ್ಟ ಮತ್ತು ವಿಭಿನ್ನ ಕೊಡುಗೆಯಾಗಿ ಸಿದ್ಧವಾಗಿದೆ “ಆಳ್ಶಿ ರೆಡೆ”.

ನಿರ್ದೇಶಕರು ಮತ್ತು ತಂಡ ಬಹಳಷ್ಟು ಶ್ರಮವಹಿಸಿ ರೂಪಿಸಿರುವ ಹಾರರ್ ಸಿನಿಮಾ ಇದಾಗಿದೆ. ಒಂದಿಷ್ಟು ಕಾಮಿಡಿ, ಸೆಂಟಿಮೆಂಟ್ ಜೊತೆಗೆ ಕೊಂಕಣಿ ಸಿನಿಮಾ ಇತಿಹಾಸದಲ್ಲಿ ದಾಖಲೆ ಬರೆಯಲು “ಆಳ್ಶಿ ರೆಡೆ” ಸಿದ್ಧವಾಗಿದೆ.
ಹಾಲಿವುಡ್ ಶೈಲಿಯಲ್ಲಿ ನಿರ್ಮಾಣವಾಗಿರೋ ಈ ಸಿನಿಮಾ ಅನಿಮೇಷನ್ ನಲ್ಲೂ ವೀಕ್ಷಕರನ್ನು ಆಕರ್ಷಿಸುತ್ತದೆ.

ಸ್ಪಾರ್ಕಲ್ ಪ್ರೊಡಕ್ಷನ್ ನಡಿಯಲ್ಲಿ RR Films International ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಗಾಡ್ವಿನ್ ಸ್ಪಾರ್ಕಲ್ ಮತ್ತು ಹೇರಾ ಪಿಂಟೋ ನಿರ್ದೇಶನ ಮಾಡಿದ್ದು, ಅವರೇ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರ ಅಗಸ್ಟ್ 13 ಕ್ಕೆ ತೆರೆಗೆ ಬರಲು ಸಿದ್ದವಾಗಿದ್ದು, ಚಿತ್ರದಲ್ಲಿ ಜನಪ್ರಿಯ ತುಳು ನಟ ದೀಪಕ್ ರೈ ಪಾಣಾಜೆ, ಮರ್ವಿನ್ ಶಿರ್ವಾ, ವಿಲಿಯಂ ಪದ್ರಂಗಿ, ಸುಮನ ಮಂಗಳೂರು, ಸಂದೀಪ್ ಮಲಾನಿ, ಹ್ಯಾನ್ಲಿ ,ಸ್ನಿಗ್ಧ ನೀರೇಶ್ವಾಲ್ಯ ಮತ್ತು ಸಂಪತ್ ಲೋಬೋ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಒಟ್ಟು 3 ಹಾಡುಗಳು ಇದ್ದು, ಎರಡು ಹಾಡನ್ನು ಬಾಲಿವುಡ್ ನ ಖ್ಯಾತ ಗಾಯಕರಾದ ಕುನಾಲ್ ಗಾಂಜವಾಲಾ ಮತ್ತು ಮೋಹಿತ್ ಚೌಹಾನ್ ಹಾಡಿದ್ದಾರೆ. ಮತ್ತೊಂದು ಹಾಡನ್ನು ಕೊಂಕಣಿ ಯ ಎಲ್ಲಾ ಕಲಾವಿದರು ಹಾಡಿದ್ದು ಚಿತ್ರದಲ್ಲಿ ಇದೊಂದು ಕಲಾವಿದರನ್ನು ಪರಿಚಯಿಸುವ ಹಾಡಾಗಿದ್ದು ಚಿತ್ರಕ್ಕೆ ಪಾಟ್ಸನ್ ಪಿರೇರಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಯತೀಶ್ ಪೂಜಾರಿ, ರಾಯನ್ ಮಾಗ್ನೆಟೊ ಕಾರ್ಯನಿರ್ವಹಿಸಿದ್ದಾರೆ. ಛಾಯಾ ಗ್ರಾಹಕರಾಗಿ ಪ್ರಜ್ವಲ್ ಸುವರ್ಣ, SFX ನಲ್ಲಿ ಲಾಯ್ ವೆಲೆಂಟೈನ್, ಹಿನ್ನೆಲೆ ಸಂಗೀತಗಾರರಾಗಿ ಪ್ರಜ್ಯುತ್ ಡೇಸಾ ಕಾರ್ಯನಿರ್ವಹಿಸಿದ್ದಾರೆ.

“ಆಳ್ಶಿ ರೆಡೆ” ಒಂದು ಫ್ಯಾಮಿಲಿ ಎಂಟರ್ರೈನರ್ ಆಗಿದ್ದು, ಹಾರರ್ ಮತ್ತು ಮ್ಯೂಸಿಕ್ ಗಮನ ಸೆಳೆಯುತ್ತದೆ. ಕಾಮಿಡಿ ಸೀನ್ ಗಳನ್ನು ಪದೇ ಪದೇ ನೋಡುವ, ನಗುವ ಆಶೆ ಪ್ರೇಕ್ಷಕ ರಿಗೆ ಮೂಡಿಯೇ ಮೂಡುತ್ತದೆ.

ಇಷ್ಟಕ್ಕೂ ಆಗಸ್ಟ್ 13 ನಿಮ್ಮ ಮನಸಿಗೆ ಇಷ್ಟವಾಗುವ ದಿನ. ಯಾಕಂದ್ರೆ ಅಂದೇ “ಆಳ್ಶಿ ರೆಡೆ” ರಿಲೀಸ್!

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments