Sunday, May 28, 2023
Homeವಾಣಿಜ್ಯಡಿಜಿಟಲ್ ಪೇಮೆಂಟ್​ಗೆ ಇನ್ನುಮುಂದೆ 16 ಡಿಜಿಟ್ ಪಿನ್ ಕಡ್ಡಾಯವಾಗುವ ಸಾಧ್ಯತೆ

ಡಿಜಿಟಲ್ ಪೇಮೆಂಟ್​ಗೆ ಇನ್ನುಮುಂದೆ 16 ಡಿಜಿಟ್ ಪಿನ್ ಕಡ್ಡಾಯವಾಗುವ ಸಾಧ್ಯತೆ

- Advertisement -


Renault

Renault
Renault

- Advertisement -

ನವದೆಹಲಿ : ಆರ್​ಬಿಐ ಡಿಜಿಟಲ್ ಪೇಮೆಂಟ್ ಪ್ರಕ್ರಿಯೆಯನ್ನು ಇನ್ನಷ್ಟು ಸುರಕ್ಷತೆಗೊಳಿಸಲು, ಆನ್​ಲೈನ್ ಮೂಲಕ ನಡೆಯುವ ನಗದು ವ್ಯವಹಾರದಲ್ಲಿನ ವಂಚನೆ ತಡೆಯಲು ಮುಂದಾಗಿದೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ನಡೆಯುವ ನಗದು ವರ್ಗಾವಣೆಗೆ ಮೂರಂಕಿಯ ಸಿವಿವಿ ಸಂಖ್ಯೆಯ ಜತೆಗೆ ಕಾರ್ಡ್​ನ 16 ಸಂಖ್ಯೆ ಮತ್ತು ಕಾರ್ಡ್ ಎಕ್ಸ್​ಪೈರಿ ದಿನಾಂಕ ನಮೂದಿಸುವುದನ್ನು ಪ್ರತಿ ವ್ಯವಹಾರಕ್ಕೂ ಕಡ್ಡಾಯ ಮಾಡಲು ಬಯಸಿದೆ. ಈ ಹೊಸ ನಿಯಮ ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರುವ ಸಾಧ್ಯತೆಗಳಿವೆ.

ಒಂದಕ್ಕಿಂತ ಹೆಚ್ಚು ಕಾರ್ಡ್ ಬಳಸುವವರಿಗೆ ಈ 16 ಸಂಖ್ಯೆಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುವುದು ಕಷ್ಟವಾಗಬಹುದು. ಆದರೆ, ಹೊಸ ನಿಯಮವು ಕಾರ್ಡ್ ಬಳಕೆದಾರರ ಮಾಹಿತಿಗೆ ಸುರಕ್ಷತೆ ಒದಗಿಸುತ್ತದೆ. ಅಮೆಜಾನ್, ಫ್ಲಿಪ್​ಕಾರ್ಟ್​ಗಳಂತಹ ಇ-ಕಾಮರ್ಸ್ ತಾಣಗಳು, ಪೇಟಿಮ್ ಮತ್ತು ಗೂಗಲ್ ಪೇ ರೀತಿಯ ಪಾವತಿ ವೇದಿಕೆಗಳು ಗ್ರಾಹಕರ ಡೇಟಾವನ್ನು ತಮ್ಮ ಸರ್ವರ್​ಗಳಲ್ಲಿ ಸಂಗ್ರಹಿಸುವುದನ್ನು ತಡೆಯುವ ಉದ್ದೇಶ ಈ ಹೊಸ ನಿಯಮದ ಹಿಂದೆಯಿದೆ. ಸದ್ಯ ಇ-ಕಾಮರ್ಸ್ ಮರ್ಚೆಂಟ್ ಸೈಟ್​ಗಳು ಮತ್ತು ಪಾವತಿಯ ಗೇಟ್​ವೇಗಳು ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಿ ಇರಿಸಿಕೊಂಡಿರುತ್ತವೆ. ಪ್ರತಿ ಪಾವತಿ ಸಂದರ್ಭದಲ್ಲಿ ಸಿವಿವಿ ಅಥವಾ ಪಿನ್ ಜತೆಗೆ ಕಾರ್ಡ್ ದಾರರ ಮೊಬೈಲ್​ಗೆ ಬರುವ ಒಟಿಪಿ ನಮೂದಾಗಬೇಕು. ಆಗ ಪಾವತಿ ಆಗುತ್ತದೆ. ಆದರೆ ಹೊಸ ನಿಯಮದಲ್ಲಿ 16 ಸಂಖ್ಯೆಯ ಕಾರ್ಡ್ ನಂಬರ್ ಮತ್ತು ಎಕ್ಸ್​ಪೈರಿ ದಿನಾಂಕವನ್ನು ಪ್ರತಿ ಸಲವೂ ನಮೂದಿಸಬೇಕು.

- Advertisement -

LEAVE A REPLY

Please enter your comment!
Please enter your name here

Most Popular

Recent Comments