ಬೆಂಗಳೂರು(22-01 -2021): ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆಯಲ್ಲಿ ಅಸಮಾಧಾನಗೊಂಡಿದ್ದ ಸಚಿವರಿಗೆ ಸಿಎಂ ಸ್ವಲ್ಪ ಸಹಕರಿಸಿ ಎಂದರೂ ಸಚಿವರು ಮಾತ್ರ ಸುಮ್ಮನಾಗಿರಲಿಲ್ಲ. ಇದರಿಂದ ಸಿಎಂ ಯಡಿಯೂರಪ್ಪ ಮತ್ತೆ ಖಾತೆ ಬದಲಾವಣೆಗೆ ಮುಂದಾಗಿದ್ದಾರೆ.
ಸಚಿವರಾದ ಕೆ.ಗೋಪಾಲಯ್ಯ, ಎಂಟಿಬಿ ನಾಗರಾಜ್, ಆರ್.ಶಂಕರ್, ಜೆ.ಸಿ.ಮಾಧುಸ್ವಾಮಿ ಹಾಗೂ ನಾರಾಯಣಗೌಡ ಅವರ ಖಾತೆ ಬದಲಾವಣೆ ಮಾಡುವ ಸಾಧ್ಯತೆ ಇದೆ. ಖಾತೆ ಬದಲಾವಣೆಯ ಕುರಿತ ಪಟ್ಟಿ ಅಂಕಿತಕ್ಕೆ ರಾಜ್ಯಪಾಲರ ಬಳಿ ಹೋಗಿದೆ ಎಂದು ಹೇಳಲಾಗುತ್ತಿದೆ.
ಸಿಎಂ ಕಚೇರಿ ಮಾಹಿತಿ ಪ್ರಕಾರ, ಕೆ.ಗೋಪಾಲಯ್ಯನವರಿಗೆ ಅಬಕಾರಿ, ಎಂಟಿಬಿ ನಾಗರಾಜ್‍ಗೆ ಪೌರಾಡಳಿತ, ಆರ್.ಶಂಕರ್ ಗೆ ತೋಟಗಾರಿಕೆ ಮತ್ತು ರೇಷ್ಮೆ, ಜೆ.ಸಿ.ಮಾಧುಸ್ವಾಮಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ಕೆ.ನಾರಾಯಣಗೌಡಗೆ ಹೆಚ್ಚುವರಿಯಾಗಿ ಅಂಕಿಸಂಖ್ಯೆ ಯೋಜನೆಗಳ ಅನುಷ್ಠಾನ ಖಾತೆಯನ್ನು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.