Tuesday, September 28, 2021
Homeಕರಾವಳಿಶಂಕಿತ ನಿಫಾ ಯುವಕನ ವರದಿ ನೆಗೆಟಿವ್‍ : ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್

ಶಂಕಿತ ನಿಫಾ ಯುವಕನ ವರದಿ ನೆಗೆಟಿವ್‍ : ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್

- Advertisement -
Renault
- Advertisement -
Home Plus
- Advertisement -

ಮಂಗಳೂರು : ಕಾರವಾರ ಮೂಲದ ಯುವಕ ನಿಫಾ ಸೋಂಕು ತಗುಲಿರುವ ಶಂಕೆ ಮೇರೆಗೆ ಸ್ವ-ಇಚ್ಛೆಯಿಂದ ಮಂಗಳೂರಿನಲ್ಲಿ ನಿಫಾ ಪರೀಕ್ಷೆಗೊಳಗಾಗಿದ್ದ ವರದಿ ಆರೋಗ್ಯ ಇಲಾಖೆಗೆ ತಲುಪಿದ್ದು, ನಿಫಾ ನೆಗೆಟಿವ್ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ. ಈ ಮೂಲಕ ಕೇರಳ ರಾಜ್ಯದಿಂದ ಕರ್ನಾಟಕಕ್ಕೂ ನಿಫಾ ವೈರಸ್ ಹಬ್ಬಿದೆಯೇ ಅನ್ನೋ ಆತಂಕ ಕೊಂಚ ದೂರವಾದಂತಾಗಿದೆ.

ಕಾರವಾರದ ವ್ಯಕ್ತಿ, ಗೋವಾದಲ್ಲಿ ಆರ್ ಟಿಪಿಸಿ‌ಆರ್ ಟೆಸ್ಟ್ ಕಿಟ್ ತಯಾರಿಕಾ ಲ್ಯಾಬ್ ನಲ್ಲಿ ಮೈಕ್ರೋ ಬಯೋಲಾಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ರಜೆಯಲ್ಲಿ ಕಾರವಾರಕ್ಕೆ ಬಂದ ಮೇಲೆ ಜ್ವರ ಕಾಣಿಸಿಕೊಂಡಿತ್ತು. ನಿಫಾದ ಲಕ್ಷಣ ಇರಬಹುದು ಎಂಬ ಶಂಕೆಯಲ್ಲಿ ಕಾರವಾರದ ಆಸ್ಪತ್ರೆಗೆ ಖುದ್ದು ದಾಖಲಾಗಿದ್ದರು. ಬಳಿಕ ಅಲ್ಲಿಂದ ಮಣಿಪಾಲ ಆಸ್ಪತ್ರೆ, ಮಂಗಳೂರಿಗೆ ಆಸ್ಪತ್ರೆಗೆ ಆಗಮಿಸಿದ್ದರು. ಅವರ ರಕ್ತ, ಗಂಟಲು ದ್ರವ ಹಾಗೂ ಯೂರಿನ್ ಮಾದರಿಯನ್ನು ತಪಾಸಣೆಗಾಗಿ ಬೆಂಗಳೂರಿನಿಂದ ಪುಣೆಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅದರ ವರದಿ ಇದೀಗ ಬಂದಿದ್ದು, ಈ ಮಾರಣಾಂತಿಕ ಸೋಂಕಿನ ಆತಂಕ ದೂರವಾಗಿದೆ ಎಂದು ಡಿಹೆಚ್‍ಒ ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments