ಮೈಸೂರು: ಜಿ.ಟಿ. ದೇವೇಗೌಡ ಒಬ್ಬ ಮಹಾನ್ ಸುಳ್ಳುಗಾರ. ತುಂಬಾ ದಿನ ಸುಳ್ಳು ಹೇಳಿಕೊಂಡು ತಿರುಗಲಾಗುವುದಿಲ್ಲ. ನಾನು ರಾಜಕೀಯದಲ್ಲಿ ಇರುವವರೆಗೂ ಜಿಟಿಡಿಯವರನ್ನು ವಾಪಸ್ ಜೆಡಿಎಸ್‌ಗೆ ಸ್ವೀಕರಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಾ.ರಾ. ಮಹೇಶ್ ರನ್ನು ಸ್ವತಃ ಜಿ.ಟಿ.ಡಿಯವರೇ ಬೆಳೆದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಸಾ.ರಾ.ಮಹೇಶ್‌ರನ್ನು ಮಂತ್ರಿ ಮಾಡಿದವನು ನಾನು. ಮಹಾನ್ ಸುಳ್ಳುಗಾರ ಎಂದರೇ ಜಿ.ಟಿ ದೇವೇಗೌಡ. ಆದರೆ ಹೆಚ್ಚು ದಿನ ಸುಳ್ಳು ಹೇಳಿಕೊಂಡು ತಿರುಗಾಡಲು ಆಗುವುದಿಲ್ಲ ಎಂದು ಹೆಚ್ ಡಿಕೆ ವಾಗ್ದಾಳಿ ನಡೆಸಿದರು.
ಬೆಳಗ್ಗೆ ಕಾಂಗ್ರೆಸ್, ಮಧ್ಯಾಹ್ನ ಜೆಡಿಎಸ್, ರಾತ್ರಿ ಬಿಜೆಪಿಯವರ ಮನೆಗಳಿಗೆ ಜಿ.ಟಿ ದೇವೇಗೌಡ ಹೋಗುತ್ತಿದ್ದಾರೆ.
ಎಲ್ಲರ ವಿಶ್ವಾಸಗಳಿಸೋಕೆ ಓಡಾಡುತ್ತಿದ್ದಾರೆ. ಎಲ್ಲೂ ಗಿಟ್ಟಲ್ಲ ಅಂದರೆ ಕೊನೆಗೆ ನಮ್ಮತ್ರನೆ ಬರ್ತಾರೆ ಅಂತಾನೂ ಗೊತ್ತು. ಎಲ್ಲ ಸುತ್ತಿಕೊಂಡು ವಾಪಸ್ ಬಂದಾಗ ಜೆಡಿಎಸ್ ಸ್ವೀಕರಿಸುವುದಿಲ್ಲ.
ನಾನು ಇರೋವರೆಗೂ ಅವರನ್ನ ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳುವುದಿಲ್ಲ. ನನ್ನ ಕೆಲವು ನಾಯಕರು ಅವರಿಗೆ ಸ್ವಲ್ಪ ಸಮಯ ಕೊಡಿ ಎಂದು ಕೇಳಿಕೊಂಡರು. ಅದಕ್ಕೆ ಈಗಾಗಲೇ ಸಮಯ ಕೊಟ್ಟಾಗಿದೆ. ಆದರೆ ಇನ್ನು ಸಮಯ ಕೊಡಲಾಗುವುದಿಲ್ಲ. ಇನ್ನು ಇವರ ಆಟ ನಡೆಯೋಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಜಲದರ್ಶಿನಿಯಲ್ಲಿ ಸಾ.ರಾ. ಮಹೇಶ್ ಭೇಟಿ ಮಾಡಿದಾಗಲೂ ಇದೆ ಮಾತು ಹೇಳಿದ್ದರು. ಸಾ.ರಾ.ಮಹೇಶ್ ಸಹ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಇವರು ಒಳಗೊಂದು ಮಾತನಾಡಿ ಹೊರಗೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಈಗ ಆಗಿರುವ ಡ್ಯಾಮೇಜ್ ಸಾಕು ಮತ್ತೆ ಇವರಿಗೆ ಟೈಂ ಕೊಡೋಕೆ ಸಾಧ್ಯವಿಲ್ಲ.
ನಾನು ಸಿಎಂ ಆಗಲು ಜಿಟಿಡಿ ಒಂದು ವೋಟು ಹಾಕಿದ್ದರು. ಅದಕ್ಕಾಗಿ ಅವರಿಗೆ ನಾನು ಮಂತ್ರಿ ಮಾಡಿದ್ದೇನೆ ನಾನೇನು ಒಬ್ಬನೆ ಮಂತ್ರಿ ಆಗಿ ಅನುಭವಿಸಿಲ್ಲ ಅಲ್ಲವೇ. ಕುಮಾರಪರ್ವ ಪಕ್ಷದ ಕಾರ್ಯಕ್ರಮ. ಅದಕ್ಕೆ ಯಾರೆಲ್ಲಾ ದೇಣಿಗೆ ಕೊಟ್ಟಿದ್ದಾರೆ ಅಂತ ಆತ್ಮ ಮುಟ್ಟಿಕೊಂಡು ಹೇಳಲಿ.. ನನ್ನನ್ನು ಸಿಎಂ ಮಾಡಲು ಇವರೇನು ರಾಜ್ಯ ಪ್ರವಾಸ ಮಾಡಿದ್ದರೇ ? ಸುಮ್ಮನೆ ಮಾತನಾಡೋದು ಬೇಡ ಎಂದು ಕೆಂಡ ಕಾರಿದರು.
ಸಿದ್ದರಾಮಯ್ಯನವರಿಗೆ ತತ್ವ ಸಿದ್ದಾಂತ ಇಲ್ಲ. ಸಭಾಪತಿ ಇಳಿಸಲು ಬಿಜೆಪಿ ಕೇಳಿಕೊಂಡಿತ್ತು.. ಸಿಎಂ ಅವರೇ ಪೋನ್ ಮಾಡಿದ್ದರು. ಅದಕ್ಕೆ ಬೆಂಬಲ ಕೊಟ್ಟಿದ್ದೇನೆ. ಸಿದ್ದರಾಮಯ್ಯ ದೇವೇಗೌಡರ ಜಾತ್ಯಾತೀತ ಸಿದ್ದಾಂತ ಪರೀಕ್ಷೆ ಮಾಡುತ್ತೇವೆ ಅಂದಿದ್ದರು. ಹೀಗಾಗಿ ಅವರು ಬೆಂಬಲ ಕೇಳಿಲ್ಲ. ಬಿಜೆಪಿಯವರು ಕೇಳಿದ್ದರು. ಅದಕ್ಕೆ ಕೊಟ್ಟಿದ್ದೇವೆ. ರೈತರ ಪರವಾಗಿ ನಮ್ಮ ನಿಲುವು ಇದ್ದೆ ಇರುತ್ತೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.