Tuesday, September 28, 2021
Homeಕರಾವಳಿಮಂಗಳೂರಿನಲ್ಲಿ ನಿಫಾ ಆತಂಕ, ನಿಫಾ ವೈರಸ್‌ ನ ಭಯ ಬೇಡ. ವ್ಯಕ್ತಿಯಲ್ಲಿ ವೈರಸ್ ಲಕ್ಷಣಗಳಿಲ್ಲ, ಆದರೂ...

ಮಂಗಳೂರಿನಲ್ಲಿ ನಿಫಾ ಆತಂಕ, ನಿಫಾ ವೈರಸ್‌ ನ ಭಯ ಬೇಡ. ವ್ಯಕ್ತಿಯಲ್ಲಿ ವೈರಸ್ ಲಕ್ಷಣಗಳಿಲ್ಲ, ಆದರೂ ನಿರ್ಲಕ್ಷ್ಯ ಮಾಡುವಂತಿಲ್ಲ : ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಮೆಗಾ ಲಸಿಕಾ ಮೇಳ…

- Advertisement -
Renault
- Advertisement -
Home Plus
- Advertisement -

ಮಂಗಳೂರು : ನಿಫಾ ಸೋಂಕಿನ ಶಂಕೆಯಿಂದ ಕಾರವಾರ ಮೂಲದ ಯುವಕ ಮಂಗಳೂರಿನಲ್ಲಿ ಸ್ವಯಂ ತಪಾಸಣೆ ಮಾಡಿರುವುದನ್ನು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ದೃಢಪಡಿಸಿದ್ದಾರೆ. ಆದರೆ, ವ್ಯಕ್ತಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಆರೋಗ್ಯವಾಗಿದ್ದಾನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ‌.ಕೆ.ವಿ‌.ರಾಜೇಂದ್ರ, ಕಾರವಾರದ ವ್ಯಕ್ತಿ, ಗೋವಾದಲ್ಲಿ ಆರ್ ಟಿಪಿಸಿ‌ಆರ್ ಟೆಸ್ಟ್ ಕಿಟ್ ತಯಾರಿಕಾ ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ನಿಫಾ ಸ್ಯಾಂಪಲ್ ಟೆಸ್ಟ್ ಕೂಡಾ ಮಾಡಲಾಗುತ್ತಿತ್ತು. ಅಲ್ಲಿಂದ ರಜೆಯಲ್ಲಿ ಕಾರವಾರಕ್ಕೆ ಬಂದ ಮೇಲೆ ಜ್ವರ ಕಾಣಿಸಿಕೊಂಡಿದೆ. ಆದರೆ ಆತನಲ್ಲಿ ನಿಫಾ ಸೋಂಕಿನ ಲಕ್ಷಣಗಳಿಲ್ಲ. ನಿಫಾ ಲಕ್ಷಣಗಳ ಬಗ್ಗೆ ಗೂಗಲ್‍ ನಲ್ಲಿ ಸರ್ಚ್ ಮಾಡಿ ವಿನಾಕಾರಣ ಆತಂಕಕ್ಕೆ ಒಳಗಾಗಿದ್ದಾನೆ. ನಿಫಾ ಸೋಂಕಿನ ಶಂಕೆ ಇಲ್ಲದಿದ್ದರೂ ನಿರ್ಲಕ್ಷ್ಯ ಮಾಡಲು ಸಾದ್ಯವಾಗದ ಕಾರಣ ಟೆಸ್ಟ್ ಗೆ ಕಳುಹಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಪುಣೆಯಿಂದ ಆದಷ್ಟು ಬೇಗ ರಿಪೋರ್ಟ್ ತರಿಸುವ ವ್ಯವಸ್ಥೆ ಆಗಿದೆ. ವ್ಯಕ್ತಿಯ ಮನೆಯ ಸದಸ್ಯರನ್ನು ಐಸೋಲೇಶನ್ ನಲ್ಲಿ ಇಡಲಾಗಿದೆ. ಸಂಪರ್ಕ ಮಾಡಿದವರನ್ನು ಪತ್ತೆ ಹಚ್ಚಲಾಗಿದೆ. ಉಡುಪಿ ಮತ್ತು ಕಾರವಾರ ಜಿಲ್ಲಾಡಳಿತಕ್ಕೆ ಅಲರ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ‌.ಕೆ.ವಿ‌.ರಾಜೇಂದ್ರ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯು ಕೋವಿಡ್ ವಿರುದ್ಧದ ಲಸಿಕೀಕರಣದಲ್ಲಿ ರಾಜ್ಯದಲ್ಲಿ ಪ್ರಸಕ್ತ 4 ನೇ ಸ್ಥಾನದಲ್ಲಿದ್ದು, ಸೆಪ್ಟೆಂಬರ್ 17 ರಂದು ಮೆಗಾ ಲಸಿಕಾ ಮೇಳದ ಮೂಲಕ 1.50 ಲಕ್ಷ ಡೋಸ್ ಲಸಿಕೆ ನೀಡಲು ಸಿದ್ಧತೆ ನಡೆಸಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಶೇ. 80 ರಷ್ಟು ಮಂದಿ ಪ್ರಥಮ ಡೋಸ್ ಪಡೆದಿದ್ದಾರೆ. ಸುಮಾರು 56,000 ಮಂದಿ ಪ್ರಸಕ್ತ ಎರಡನೆ ಡೋಸ್ ಪಡೆಯಲು ಅರ್ಹತೆ ಪಡೆದಿದ್ದಾರೆ. ಸೆಪ್ಟೆಂಬರ್ 17 ರಂದು ಈವರೆಗೆ ಪ್ರಥಮ ಲಸಿಕೆ ಪಡೆಯದವರೆಲ್ಲರೂ ಲಸಿಕೆ ಪಡೆಯುವುದನ್ನು ಖಾತರಿಪಡಿಸುವುದು ಆದ್ಯತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಯೂ ಜಿಲ್ಲಾಡಳಿತದ ಮೂಲಕ ಉಚಿತವಾಗಿ ಆ ದಿನ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟು 500 ಕೇಂದ್ರಗಳ ಮೂಲಕ ಅಂದು ಲಸಿಕೆ ನೀಡುವ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾ ಗಿದೆ ಎಂದು ಸುದ್ದಿಗೋಷ್ಠಿಯಲ್ಲಿ
ಜಿಲ್ಲಾಧಿಕಾರಿಯವರು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ವೆನ್‍ಲಾಕ್ ಅಧೀಕ್ಷಕ ಡಾ. ಸಾಶಿವ ಶ್ಯಾನುಭಾಗ್ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments