Tuesday, September 28, 2021
Homeಕ್ರೀಡೆಒಲಿಂಪಿಕ್ಸ್ ನ ವೀಡಿಯೊಗಳನ್ನು ಸಾಮಾಜಿಕ ತಾಣಗಳಲ್ಲಿ ಯಾರೂ ಹಂಚಿಕೊಳ್ಳುವಂತಿಲ್ಲ…ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ನಿರ್ಬಂಧ…

ಒಲಿಂಪಿಕ್ಸ್ ನ ವೀಡಿಯೊಗಳನ್ನು ಸಾಮಾಜಿಕ ತಾಣಗಳಲ್ಲಿ ಯಾರೂ ಹಂಚಿಕೊಳ್ಳುವಂತಿಲ್ಲ…ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ನಿರ್ಬಂಧ…

- Advertisement -
Renault
- Advertisement -
Home Plus
- Advertisement -

ಟೋಕಿಯೊ ಒಲಿಂಪಿಕ್ಸ್ 2020 ರ ವೀಡಿಯೊಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಸಾರ ಮಾಡುವುದಕ್ಕೆ ಮತ್ತು ಹಂಚಿಕೊಳ್ಳುವುದಕ್ಕೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನಿರ್ಬಂಧ ಹೇರಿದೆ. ಅಥ್ಲೀಟ್‌ಗಳು ಕೂಡ ಒಲಿಂಪಿಕ್ಸ್ ಸ್ಥಳದಿಂದ ವೀಡಿಯೊಗಳನ್ನು ಸಾಮಾಜಿಕ ತಾಣಗಳಲ್ಲಿ ಲೈವ್ ಇಲ್ಲವೇ ವಿಡಿಯೊ ಪೋಸ್ಟ್ ಮಾಡುವುದಕ್ಕೆ ಐಒಸಿ ನಿರ್ಬಂಧವಿದೆ. ಒಲಿಂಪಿಕ್ಸ್ ನೇರಪ್ರಸಾರ ಮತ್ತು ವಿಡಿಯೊ ಪ್ರಸಾರದ ಹಕ್ಕು ಹೊಂದಿರುವ ಬ್ರಾಡ್‌ಕಾಸ್ಟ್ ಕಂಪನಿಗಳ ಹಕ್ಕು ರಕ್ಷಣೆಯ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಒಸಿ ಮಾಹಿತಿ ನೀಡಿದೆ.

ಎರಡು ಚಿನ್ನದ ಪದಕ ಪಡೆದಿರುವ ಜಮೈಕಾದ ಅಥ್ಲೀಟ್ ಎಲೆನ್ ಥಾಂಪ್ಸನ್ ಹೆರಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಲಿಂಪಿಕ್ಸ್ ವೀಡಿಯೋವೊಂದನ್ನು ಹಂಚಿಕೊಂಡಿದ್ದರು. ಅದಾದ ಬೆನ್ನಲ್ಲೇ, ಒಲಿಂಪಿಕ್ಸ್ ಬ್ರಾಡ್‌ಕಾಸ್ಟ್ ಹಕ್ಕುಗಳನ್ನು ಮೀರಿರುವ ಆರೋಪದಲ್ಲಿ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಒಲಿಂಪಿಕ್ಸ್ ಕ್ಷಣಗಳ ಫೋಟೊಗಳನ್ನು ಹಂಚಿಕೊಳ್ಳಲು ಐಒಸಿ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ ಒಲಿಂಪಿಕ್ಸ್ ವಿಡಿಯೊಗಳ ಪ್ರಸಾರದ ಹಕ್ಕು ಬ್ರಾಡ್‌ಕಾಸ್ಟ್ ಕಂಪನಿಗಳದ್ದಾಗಿರುತ್ತದೆ ಎಂದು ಐಒಸಿ ವಕ್ತಾರ ಮಾರ್ಕ್ಸ್ ಆ್ಯಡಮ್ಸ್ ಹೇಳಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments