Monday, January 17, 2022
Homeಸಿನಿಮಾವಂಚಕ ಸುಕೇಶ್ ಜೊತೆ ಅತಿ ಆಪ್ತವಾಗಿರುವ ಲಂಕಾ ಸುಂದರಿಯ ಮತ್ತೊಂದು ಫೋಟೋ ವೈರಲ್..!

ವಂಚಕ ಸುಕೇಶ್ ಜೊತೆ ಅತಿ ಆಪ್ತವಾಗಿರುವ ಲಂಕಾ ಸುಂದರಿಯ ಮತ್ತೊಂದು ಫೋಟೋ ವೈರಲ್..!

- Advertisement -
Renault


- Advertisement -

ಶ್ರೀಲಂಕಾದ ಹಾಟ್ ಬ್ಯೂಟಿ , ಬಾಲಿವುಡ್ ನ ಗ್ಲಾಮರಸ್ ಗೊಂಬೆ ಜಾಕ್ವೆಲಿನ್ ಫರ್ನಾಂಡೀಸ್ ಹೆಸದರು ಕೆಲ ದಿನಗಳಿಂದ ವಂಚಕ ಸುಕೇಶ್ ಜೊತೆಗೆ ತಳುಕುಹಾಕಿಕೊಂಡಿದೆ..

ಅವರಿಬ್ಬರ ನಡುವೆ ಸಂಬಂಧವಿದೆ ಎಂದುಕ್ಕೆ ಪೂರಕವಾಗಿ ಅವರ ಅತಿ ಆಪ್ತ ಫೋಟೋಗಳು ವೈರಲ್ ಆಗ್ತಿವೆ.. ಜೊತೆಗೆ ಜಾಕ್ವೆಲಿನ್ ಗೆ ಕೋಟಿ ಕೋಟಿ ಮೌಲ್ಯದ ಗಿಫ್ಟ್ ಗಳನ್ನ ವಂಚಕ ಸುಕೇಶ್ ನೀಡಿರೋದಾಗಿ ಬಾಯ್ಬಿಟ್ಟಿದ್ದಾನೆ.. ಅಲ್ಲದೇ ಜಾಕ್ವೆಲಿನ ಈ ಸಂಬಂಧ ಇಡಿ ವಿಚಾರಣೆಗೂ ಹಾಜರಾಗಿದ್ರು..

ಹೀಗಿರೋವಾಗ್ಲೇ ಸುಕೇಶ್ ಜೊತೆಗಿನ ಮತ್ತೊಂದು ಆಪ್ತ ಫೋಟೋ ವೈರಲ್ ಆಗಿದೆ.. ಈ ಫೋಟೋದಲ್ಲಿ ಸುಕೇಶ್ ಜಾಕ್ವೆಲಿನ್ ಮೂಗಿಗೆ ಮುತ್ತಿಡುತ್ತಿದ್ದಾರೆ.. ಜಾಕ್ವೆಲಿನ ಕೂಡ ಇದನ್ನ ವಿರೋಧಿಸಿಲ್ಲ.. ಬದಲಾಗಿ ಪ್ರೀತಿಯಿಂದ ನಗುತ್ತಾ ಕಣ್ಣುಮುಚ್ಚಿದ್ದಾರೆ.

ನನ್ನ ಹಾಗೂ ಜಾಕ್ವೆಲಿನ್ ನಡುವೆ ಯಾವುದೇ ಹಣಕಾಸು ವ್ಯವಹಾರ, ಉಡುಗೊರೆ ವಿನಿಮಯ ಆಗಿದ್ದರೂ ಅದು ನಮ್ಮ ಖಾಸಗಿ ಉಳಿದಂತೆ ಆಕೆಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಎಲ್ಲ ಬಾಲಿವುಡ್ ಗೆಳೆಯರನ್ನು ಈ ಪ್ರಕರಣದಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ನನ್ನನ್ನು ಕೆಟ್ಟವನು ಎಂದು ತೋರಿಸಲು ಅವರನ್ನೆಲ್ಲ ಬಳಸಿಕೊಳ್ಳಲಾಗುತ್ತಿದೆ. ನಾನು ಇನ್ನು ಮುಂದೆ ಸಿನಿಮಾ ಸಂಬಂಧಿ ವ್ಯವಹಾರ ಮಾಡದಂತೆ ಮಾಡಲಾಗುತ್ತಿದೆ ಎಂದು ಸುಕೇಶ್ ಪತ್ರದಲ್ಲಿ ಹೇಳಿದ್ದಾನೆ.

ತಿಹಾರ್ ಜೈಲಿನ ಪೊಲೀಸರ ಮೇಲೂ ಆರೋಪ ಮಾಡಿದರು ಸುಕೇಶ್, ಸುಳ್ಳು ಪ್ರಕರಣಗಳನ್ನು ನನ್ನ ಮೇಲೆ ಹೇರಲಾಗಿದೆ. ನಾನು ಈ ಪ್ರಕರಣದಲ್ಲಿ ಸಂತ್ರಸ್ಥ. ಜೈಲು ಪೊಲೀಸರಿಗೆ, ಅಧಿಕಾರಿಗಳಿಗೆ 12.50 ಕೋಟಿ ಹಣವನ್ನು ನಾನು ನೀಡಿದ್ದೇನೆ ಎಂದು ಆರೋಪ ಮಾಡಿದ್ದಾರೆ. ವಿಷಯ. ಆಕೆಗೆ ಉಡುಗೊರೆ ಕೊಡಲು ಇತರರ ಹಣವನ್ನು ಬಳಕೆ ಮಾಡಿಲ್ಲ. ಅಥವಾ ಅಕ್ರಮದ ಹಣ ಬಳಕೆ ಮಾಡಿಲ್ಲ. ಹಾಗೊಂದು ವೇಳೆ ಮಾಡಿದ್ದರೆ ಅದನ್ನು ನ್ಯಾಯಾಲಯವೇ ನಿರ್ಧರಿಸುತ್ತದೆ.

- Advertisement -Home Plus


LEAVE A REPLY

Please enter your comment!
Please enter your name here

- Advertisment -

Most Popular

Recent Comments