ಮಂಗಳೂರು: ಒಂದೇ ಜಾತಿ ಒಂದೆ ಧರ್ಮ ಒಂದೇ ದೇವರು ಎಂಬ ಶ್ರೇಷ್ಠ ಸಂದೇಶ ಸಾರಿದ ಸಂತ, ಮಾನವತಾವಾದಿ, ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿತ್ರಣವನ್ನು ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಅತ್ಯಂತ ದುಃಖಕರ ನೋವಿನ ಸಂಗತಿ.
ಸಮಾನತೆಯ ಸಮಾಜದ ಕನಸು ಕಾಣುವ ಪ್ರತಿಯೊಬ್ಬ ಭಾರತೀಯರು ಖಂಡಿಸಬೇಕಿದೆ. ಒಬ್ಬ ಮಹಾನ್ ಸಂತರಿಗೆ ಮಾಡಿದ ಈ ಅವಮಾನವನ್ನು ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ತೀವ್ರವಾಗಿ ಖಂಡಿಸುತ್ತದೆ.
ಈ ಬಗ್ಗೆ ಕೇಂದ್ರ ಸರಕಾರ ನಾರಾಯಣ ಗುರುಗಳ ಭಾವ ಚಿತ್ರವಿರುವ ಸ್ತಬ್ಧಚಿತ್ತವನ್ನು ಗಣರಾಜ್ಯೋತ್ಸದ ಪರೇಡ್ ಸಮಿತಿ ಅಂಗೀಕಾರ ಮಾಡುವುದರ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಗೌರವವನ್ನು ನೀಡಬೇಕು ಎಂದು ಈ ಮೂಲಕ ಆಗ್ರಹ ಮಾಡುತ್ತೇವೆ. ಎಂದು ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಸ್ಥಾಪಕಾಧ್ಯಕ್ಷ ಅವಿನಾಶ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದರು.