ಪೋಷಕರ ಪ್ರಾಮುಖ್ಯತೆ…
ಮಂಗಳೂರು: ಪೋಷಕರು ನಮ್ಮ ಜೀವನದ ಪ್ರಮುಖ ವರ ಹಾಗೂ ದೊರೆತ ಆಶೀರ್ವಾದ. ನಮ್ಮ ಜೀವನದ ಹಲವು ಸಮಯಗಳನ್ನು ನಾವು ಪೋಷಕರೊಂದಿಗೆ ಕಳೆಯುತ್ತೇವೆ. ಅವರು ಜೀವನವೆಂದು ಭೂಮಿಯಲ್ಲಿ ಹುದುಗಿ ಹೋಗಿದ್ರೂ, ಮೂಲ ಬೇರುಗಳಾಗಿ ನಿಂತು ನಮ್ಮ ಬೆಳವಣಿಗೆಗೆ ಎಂದೂ ಪೋಷಕರೇ ನಮ್ಮ ಅಸ್ಥಿತ್ವಕ್ಕೆ ಮೂಲ ಕರ್ತೃಗಳು ಹಾಗೂ ಅವರಿಲ್ಲದಿದ್ದಲ್ಲಿ ನಮಗೆ ಅಸ್ಥಿತ್ವವೇ ಇಲ್ಲ. ಯಾವ ರೀತಿಯಲ್ಲಿ ಭೂತಕಾಲವಿಲ್ಲದಿದ್ದಲ್ಲಿ ವರ್ತಮಾನ ಸಾಧ್ಯವಿಲ್ಲವೋ, ಪೋಷಕರ ಹೊರತು ಮಕ್ಕಳು ತಮ್ಮ ಜೀವನ, ತಮ್ಮ ಗುರುತು ಕಾಣಲು ಸಾಧ್ಯವಿಲ್ಲ.
ಪೋಷಕರು ನಮ್ಮ ಜೀವನ ಭದ್ರಗೊಳಿಸಲು ಅವರು ತಮ್ಮ ಜೀವನ ಸವೆಸುವುದನ್ನು ಮರೆತೇ ಬಿಡುತ್ತೇವೆ. ನಮಗಾಗಿ ದುಡಿದು ಕೆಲಸ ಮಾಡ್ತಾರೆ. ಅವರ ವಿನಹಃ ನಮ್ಮ ಜೀವನ ಸಾಧ್ಯವಿದೆಯೇ?
ಅವರನ್ನು ಬಿಟ್ಟಲ್ಲಿ ನಮ್ಮ ಜೀವನವಂತೂ ನಿಂತ ನೀರಾಗಿ ಬಿಡುತ್ತದೆ.
ನೀವೇನಾದರೂ ನೋವು ತಿಂದಿದ್ದೀರಾ..?
ಹೃದಯ ನುಚ್ಚು ನೂರಾಗುವಂತಹ ಸಂಕಟವನ್ನು ಅನುಭವಿಸಿದ್ದೀರಾ..?
ಎಂದಾದರೂ ನೀವು ಅನರೋಗ್ಯ ಪೀಡಿತರಾಗಿದ್ದೀರಾ..?
ಜೀವನದಲ್ಲಿ ಎಂದಾದರೂ ಉಭಯ ಸಂಕಟವನ್ನು ಅನುಭವಿಸಿದ್ಧೀರಾ..?
ನೀವೆಂದಾದರೂ ಒಂಟಿತನ ಹಾಗೂ ಹತಾಶೆಯನ್ನು ಅನುಭವಿಸಿದ್ಧೀರಾ?
ಹೌದೆಂದಾದಲ್ಲಿ, ನಿಮ್ಮ ಸಂಕಷ್ಟದ ಸಮಯದಲ್ಲಿ, ಭಿನ್ನಾಭಿಪ್ರಾಯವೆಂಬ ಕತ್ತಲಿನ ಕೂಪದ ಸಮಯದಲ್ಲಿ ನಿಮ್ಮ ಜತೆಗಿದ್ದವರು ಯಾರು?
ಬೆಳಕಿನ ಕಿರಣಗಳಂತೆ ನಮ್ಮ ಪೋಷಕರು ಸಂಕಷ್ಟದಲ್ಲಿ ನಮ್ಮ ಜೀವನದಲ್ಲಿ ಆಶಾಕಿರಣವಾಗಿ ಬೆಳಗುತ್ತಾರೆ.
ಮಂಗಳೂರು ವಾರ್ತೆ ನಿಮ್ಮ ಮುಂದಿನ ರಾಜಕೀಯದ ಭವಿಷ್ಯ ಕೆ ಶುಭಹಾರೈಸುತ್ತದೆ
.