ಮಂಗಳೂರು: ಕೋವಿಡ್ ಕಾರಣದಿಂದ ಮನೆಯಲ್ಲಿ ಕುಳಿತಿದ್ದ ಕಾಲೇಜು ಹುಡುಗ -ಹುಡುಗಿಯರು ಗೂಡಿನಿಂದ ಬಿಟ್ಟ ಹಕ್ಕಿಗಳಂತೆ ಆಗಿದ್ದಾರೆಯೋ ಏನೋ? ಬೀಚು, ಪಾರ್ಕ್, ಫಾಲ್ಸ್ ಯಾವುದನ್ನೂ ಹಿಂದೆಂದೂ ನೋಡಿರದ ಹಾಗೆ ಸುತ್ತಲಾರಾಂಭಿಸಿದ್ದಾರೆ.
ಮಂಗಳಾದೇವಿ ಸಮೀಪದ ಕಾಲೇಜಿನ ಮೂರು ಜನ ಹೆಣ್ಣು ಮಕ್ಕಳಿನ ನಾಲ್ಕು ಜನ ಗಂಡು ಮಕ್ಕಳು ಎರ್ಮಾಯಿ ಫಾಲ್ಸ್ ಗೆ ಬಂದಿದ್ದಾರೆ. ಅವರಲ್ಲಿ ಒಬ್ಬ ಅನ್ಯ ಕೋಮಿನ ಯುವಕ.
ಫಾಲ್ಸ್ ಸುತ್ತ ಮುತ್ತ ಓಡಾಡುವವರು ಇವರನ್ನು ನೋಡಿ ದಂಗಾಗಿದ್ದರು. ಇಷ್ಟೊಂದು ಓಪನ್ ಆಗಿ ಇರುವುದು ನೋಡಿ ಇವರ್ಯಾರೋ ಬೇರೆ ರಾಜ್ಯ ದವರು ಎಂದೂ ಭಾವಿಸಿದ್ದರು. ಮತ್ತೆ ಕೆಲವರಿಗೆ ಸಂಶಯ ಬಂದು ವಿಚಾರಿಸಿದಾಗ ಇವರು ಮಂಗಳಾದೇವಿ ಸಮೀಪದ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಸ್ಥಳೀಯ ಯುವಕರು-ಹಿರಿಯರು ಇವರಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ. ಯಾಕೆಂದರೆ ಇವರಿಗೆ ಮಾನ ಮರ್ಯಾದೆ ಎಂದರೆ ಏನು ಎಂಬ ಶಿಕ್ಷಣ ಇನ್ನೂ ದೊರಕಿಲ್ಲ, ಅದನ್ನು ಕಲಿತು ಈ ರೀತಿಯ ಜಾಲಿ ಬಿಟ್ಟು ಬಿಡಲಿ. ಹೆತ್ತವರು ತಮ್ಮ ಮಕ್ಕಳು ಏನು ಮಾಡುತ್ತಾರೆ, ಎಲ್ಲಿ ಹೋಗುತ್ತಾರೆ ಎಂದು ಹಿರಿಯರು ಬುದ್ಧಿ ಹೇಳಿದ್ದಾರೆ.
ಪ್ರತ್ಯಕ್ಷದರ್ಶಿ ಒಬ್ಬರು ಹೇಳುವ ಪ್ರಕಾರ, ಫಾಲ್ಸ್ ಹತ್ತಿರ ಇದ್ದ ಯುವಕ ಯುವತಿಯರಿಗೆ ತಮ್ಮ ಮೈ ಮೇಲೆ ಪರಿವೆಯೇ ಇಲ್ಲದ ಹಾಗಿದ್ದರು. ಅವರ ಫೋಟೋ ವೈರಲ್ ಆಗಲು ಶುರುವಾಗಿದೆ.