ಹಾಡುಗಳಲ್ಲೇ ಸುದ್ದಿ ಮಾಡುತ್ತಿದೆ ಪೆಪ್ಪರೆರೆರೆ…. ಪೆರೆರೆರೆರೆ..!
ಹಾಡಲ್ಲೇ ಗೆದ್ದಿರುವ ‘ಪೆಪ್ಪರೆ ಪೆರೆರೆ’ ಇನ್ನು ಥಿಯೇಟರ್ ನಲ್ಲಿ ಬಿಡುತ್ತಾ?
ಮಂಗಳೂರು: ತುಳು ಚಿತ್ರನಟ ಭೋಜರಾಜ್ ವಾಮಂಜೂರ್ ಹಾಡಿ ನಟಿಸಿರುವ ”ಆತಳ.. ವಿತಲ ಶೂರ.. ಮರುವಾಯಿ ಮಗಧೀರ” ಹಾಡು ಈಗಾಗಲೇ ಜನಪ್ರಿಯವಾಗಿದೆ. ಎಲ್ಲೆಲ್ಲೂ ಅದೇ ಹಾಡು ಕೇಳಿಬರುತ್ತಿದೆ.
ಸಣ್ಣ ಹುಡುಗ ಒಬ್ಬ ಇದೇ ಹಾಡನ್ನು ವೇದಿಕೆಯಲ್ಲಿ ಹಾಡಿ ಜನರನ್ನು ರಂಜಿಸಿದ ವಿಷಯ ಹಳೆಯದಾಗುತ್ತಾ ಬಂತು. ಈಗ ಎಲ್ಲರ ನಿರೀಕ್ಷೆ ಸಿನಿಮಾ ರಿಲೀಸ್ ಯಾವಾಗ ಆಗುತ್ತೆ ಅಂತ. ಆದ್ರೆ ಅದಕ್ಕೂ ಮುನ್ನ ಇನ್ನೊಂದು ವಿಷಯ ಅಂದ್ರೆ ಇನ್ನೂ ಕೆಲವು ಹಾಡುಗಳು.
” ಬದುಕೇ…. ಒಂಜಿ ಉಡುಗೊರೆ ದೇವೆರನಾ…..”ತುಂಬಾನೇ …ಅರ್ಥಪೂರ್ಣವಾಗಿದೆ.ಪ್ರತಿಯೊಬ್ಬ ವ್ಯಕ್ತಿಯ ಜೀವನದ ಕಷ್ಟ -ಸುಖಗಳ ಚಿತ್ರಣ ವನ್ನು ಒಂದು ಹಾಡಿನಲ್ಲೇ ಬಿಂಬಿಸಿರೋದು ಸಾಹಿತಿಯೊಬ್ಬನ ಜೀವನದ ಅನುಭವನ್ನು ತಿಳಿಸಿಕೊಡುತ್ತದೆ.ಈ ಹಾಡಿನಲ್ಲಿ ಚಿತ್ರದ ನಾಲ್ಕು ಜನ ಹೀರೋಗಳನ್ನು ನಿರ್ದೇಶಕರು ತೋರಿಸಿರೋ ರೀತಿ ತುಂಬಾ ಚೆನ್ನಾಗಿದೆ.
“ಬದ್ ಕೇ ಒಂಜಿ ಉಡುಗೊರೆ ದೇವೆರ್ ನ” ಈ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಪ್ರತಿಕ್ರಿಯೆಯ ಸುರಿಮಳೆಯ ಮಹಾಪುರವೇ ಬರ್ತಾ ಇದೆ. ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್ ನಂತಹ ದಿಗ್ಗಜರು ಚಿತ್ರದಲ್ಲಿ ಮಿಂಚಿದ್ದಾರೆ. ಗುರು ಬಾಯರ್ ಸಂಗೀತದಿಂದ ಈ ಹಾಡು ಜನರ ಮನಸ್ಸನ್ನು ಗೆದ್ದಿದೆ. ಅಷ್ಟೇ ಅಲ್ಲದೆ ಲಾಕ್ ಡೌನ್ ಟೈಮ್ ನಲ್ಲೂ ಸದ್ದು ಮಾಡಿದ್ದು, ಹಲವಾರು ಪ್ರೇಕ್ಷಕರು ಈ ಹಾಡನ್ನು ಹಾಡಿ, ಕುಣಿದು ಕುಪ್ಪಳಿಸಿದ್ದಾರೆ.
”ಪೆಪ್ಪರೆ ಪೆರೆರೆ” ಸಿನಿಮಾ ರಿಲೀಸ್ ಆದ ಮೇಲೆ ನಮ್ಮ ತುಳುನಾಡ ಜನತೆಯ ಕಾಲು ನೆಲದ ಮೇಲೆ ನಿಲ್ಲಲಿಕ್ಕೇ ಇಲ್ಲ ಎನ್ನುವ ಹಾಗೆ ಕ್ರೇಜ್ ಹುಟ್ಟಿದೆ. ಒಳ್ಳೆಯ ಸಿನಿಮಾ ನಿರ್ಮಿಸಿರುವ ನಿಮಗೆಲ್ಲ ಆಲ್ ದಿ ಬೆಸ್ಟ್!