Thursday, July 29, 2021
Homeಕ್ರೈಂಪಬ್ ನಲ್ಲಿ ಯುವತಿಯ ಭುಜ ಕಚ್ಚಿ ವಿಕೃತ ಮೆರೆದ ಭೂಪ…!!!ತಬ್ಬಿಕೊಂಡು ಮುದ್ದಾಡಿದವ ಈಗ ಕಂಬಿಯ ಹಿಂದೆ…!!!

ಪಬ್ ನಲ್ಲಿ ಯುವತಿಯ ಭುಜ ಕಚ್ಚಿ ವಿಕೃತ ಮೆರೆದ ಭೂಪ…!!!ತಬ್ಬಿಕೊಂಡು ಮುದ್ದಾಡಿದವ ಈಗ ಕಂಬಿಯ ಹಿಂದೆ…!!!

- Advertisement -
usha-jewellers
- Advertisement -Home Plus

ಬೆಂಗಳೂರು: ಪೋಷಕರ ಜೊತೆ ಪಬ್​ಗೆ ಹೋದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಕಾಮುಕನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಮಧುಸೂದನ್ ಚೆಲ್ಲಾರಾಮ್ ಬಂಧಿತ ಆರೋಪಿ. ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಚರ್ಚ್ ಸ್ಟ್ರೀಟ್ ರೋಡ್​ನಲ್ಲಿರುವ ಮೀರಾಜ್ ಬಾರ್ ಅಂಡ್ ರೆಸ್ಟೊರೆಂಟ್​ನಲ್ಲಿ ಘಟನೆ ನಡೆದಿತ್ತು.

ಶರತ್ ರೈ ಎಂಬುವರಿಗೆ ಸೇರಿದ ಪಬ್​ನಲ್ಲಿ ಇದೇ ತಿಂಗಳ 21ರ ರಾತ್ರಿ 9.30ಕ್ಕೆ ತಾಯಿ ಹಾಗೂ ಸ್ನೇಹಿತರ ಜೊತೆ ಯುವತಿಯು ಪಬ್​ಗೆ ಹೋಗಿದ್ದಳು. ಈ ವೇಳೆ ಮಧುಸೂದನ್ ಸ್ನೇಹಿತೆಯ ಕಡೆಯಿಂದ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ. ಪಬ್​ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಯುವತಿ ಬಳಿ ಬಂದಿದ್ದ ಮಧುಸೂದನ್ ಏಕಾಏಕಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ‌.

ಈ ವೇಳೆ ಯುವತಿಯ ಭುಜ ಕಚ್ಚಿ ವಿಕೃತಿ ಮೆರೆದಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಈ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೊಂದ ಯುವತಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ‌.

- Advertisement -

Renault

LEAVE A REPLY

Please enter your comment!
Please enter your name here

- Advertisment -

Most Popular

Recent Comments