Sunday, September 24, 2023
Homeಕ್ರೈಂ20 ರೂಪಾಯಿಯ ಇಡ್ಲಿಗಾಗಿ ವ್ಯಾಪಾರಿಯ ಕೊಲೆ

20 ರೂಪಾಯಿಯ ಇಡ್ಲಿಗಾಗಿ ವ್ಯಾಪಾರಿಯ ಕೊಲೆ

- Advertisement -



Renault

Renault
Renault

- Advertisement -

ಮುಂಬೈ: ಕೆಲವೊಮ್ಮೆ ಸಣ್ಣ ಪುಟ್ಟ ಕಾರಣಗಳಿಗೂ ಕೊಲೆಗಳು ನಡೆಯುತ್ತದೆ. ಕೇವಲ 20 ರೂ ವಿಚಾರಕ್ಕೆ ವ್ಯಕ್ತಿಯ ಕೊಲೆಯಾಗುತ್ತದೆ ಎಂದರೆ ನಂಬುವುದು ಕಷ್ಟ. ಆದರೆ ಇಂತಹ ಘಟನೆ ನಡೆದಿದ್ದು ಮಹಾರಾಷ್ಟ್ರದ ಥಾಣೆಯಲ್ಲಿ.

ಥಾಣೆಯಲ್ಲಿ ತಳ್ಳು ಗಾಡಿ ವ್ಯಾಪಾರಿಯೊಬ್ಬನನ್ನು ಕೊಲೆ ಮಾಡಲಾಗಿದೆ. 26 ವರ್ಷದ ವೀರೇಂದ್ರ ಯಾದವ್ ಎಂಬಾತನೇ ಕೊಲೆಯಾದ ಯುವಕ.

ವೀರೆಂದ್ರ ಯಾದವ್ ಇಲ್ಲಿನ ಮೀರಾ ರಸ್ತೆಯಲ್ಲಿ​ ತಳ್ಳುಗಾಡಿಯಲ್ಲಿ ಇಡ್ಲಿ ಉಪಹಾರದ ವ್ಯಾಪಾರ ಮಾಡುತ್ತಿದ್ದ. ಶುಕ್ರವಾರ ಬೆಳಗ್ಗೆ ಆತನ ಗಾಡಿಯ ಬಳಿ ಮೂವರು ತಿಂಡಿ ತಿನ್ನಲೆಂದು ಬಂದಿದ್ದರು. ಆಗ ಅವರಿಗೆ ‘ನೀವು ನನಗೆ 20 ರೂಪಾಯಿ ಬಾಕಿ ಕೊಡುವುದಿದೆ’ ಎಂದು ವೀರೇಂದ್ರ ನೆನಪಿಸಿದ್ದಾನೆ.

ಇದೇ ಕಾರಣಕ್ಕೆ ಜಗಳ ಆರಂಭವಾಗಿದೆ.

ಮಾತುಕತೆ ಹೆಚ್ಚಾಗಿ ಕೈಕೈ ಮಿಲಾಯಿಸಲಾಗಿದೆ. ಈ ವೇಳೆ ಒಬ್ಬಾತ ವಿರೇಂದ್ರ ಯಾದವ್ ನನ್ನು ತಳ್ಳಿದ್ದಾನೆ. ಆ ರಭಸಕ್ಕೆ ಕಲ್ಲಿನ ಮೇಲೆ ಬಿದ್ದ ವೀರೆಂದ್ರ ನ ತಲೆಗೆ ಗಾಯವಾಗಿತ್ತು. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆತರುವ ವ್ಯವಸ್ಥೆ ಮಾಡಿದರೂ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಮೂವರು ವ್ಯಕ್ತಿಗಳ ವಿರುದ್ಧ ನಯಾ ನಗರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments