Sunday, May 28, 2023
Homeದೇಶಪ್ರೊವಿಡೆಂಟ್ ಫಂಡ್ ನ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡುವ ಅವಧಿ ವಿಸ್ತರಣೆ

ಪ್ರೊವಿಡೆಂಟ್ ಫಂಡ್ ನ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡುವ ಅವಧಿ ವಿಸ್ತರಣೆ

- Advertisement -


Renault

Renault
Renault

- Advertisement -

ನವದೆಹಲಿ : ಪಿ.ಎಫ್ ಖಾತೆದಾರರಿಗೆ ಆಧಾರ್‌ನೊಂದಿಗೆ ಖಾತೆ ಲಿಂಕ್ ಮಾಡುವ ದಿನಾಂಕವನ್ನು ಇ.ಪಿ.ಎಫ್‌.ಒ ವಿಸ್ತರಿಸಿದೆ. ಈ ಮೊದಲು ಇಪಿಎಫ್‌ಒ ಖಾತೆ ಜೊತೆ ಆಧಾರ್ ಲಿಂಕ್ ಗೆ ಆಗಸ್ಟ್ 31 ಅನ್ನು ಕೊನೆಯ ದಿನವೆಂದು ಘೋಷಣೆ ಮಾಡಿತ್ತು. ಆದರೆ ಈಗ ದಿನಾಂಕವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ. ಇದರೊಳಗೆ, ಇ.ಪಿ.ಎಫ್‌.ಒ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ, ಖಾತೆಗೆ ಕಂಪನಿ ನೀಡುವ ಕೊಡುಗೆ ಬರುವುದಿಲ್ಲವೆಂದು ಇಪಿಎಫ್‌ಒ ಹೇಳಿದೆ. ಅಲ್ಲದೆ, ಖಾತೆದಾರರು ಖಾತೆಯಲ್ಲಿರುವ ಹಣ ಹಿಂಪಡೆಯಲು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಕಂಪನಿ ಹೇಳಿದೆ.

ಇಪಿಎಫ್ ಖಾತೆದಾರರ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಇಪಿಎಫ್‌ಒ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಆಧಾರ್ ಕಾರ್ಡ್ ಲಿಂಕ್ ಮಾಡಲು, ಮೊದಲು ಇಪಿಎಫ್‌ಒ ಪೋರ್ಟಲ್ epfindia.gov.in ಗೆ ಹೋಗಬೇಕು. ಯುಎಎನ್ ಹಾಗೂ ಪಾಸ್ವರ್ಡ್ ಬಳಸಿ, ಖಾತೆಗೆ ಲಾಗಿನ್ ಆಗಬೇಕು. ನಿರ್ವಹಿಸು ವಿಭಾಗದಲ್ಲಿ ಕೆವೈಸಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ. ಆಧಾರ್ ಲಿಂಕ್ ಮಾಡುವ ಆಯ್ಕೆ ಆರಿಸಿ, ಆಧಾರ್ ಕಾರ್ಡ್ ನಲ್ಲಿ ಆಧಾರ್ ಸಂಖ್ಯೆ ಮತ್ತು ಹೆಸರನ್ನು ಟೈಪ್ ಮಾಡುವ ಮೂಲಕ ಸೇವ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮಾಹಿತಿ ಸುರಕ್ಷಿತವಾಗಿರುತ್ತದೆ. ಆಧಾರನ್ನು ಪರಿಶೀಲಿಸಲಾಗುತ್ತದೆ. ಕೆವೈಸಿ ದಾಖಲೆಗಳು ಸರಿಯಾಗಿದ್ದರೆ, ಆಧಾರ್ ಅನ್ನು ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆಯಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments