Friday, December 2, 2022
Homeಕರಾವಳಿಪಿಎಫ್‌ಐ ಇನ್ನೂ ಆಕ್ಟಿವ್ ಆಗಿದೆ - ಪ್ರಮೋದ್ ಮುತಾಲಿಕ್

ಪಿಎಫ್‌ಐ ಇನ್ನೂ ಆಕ್ಟಿವ್ ಆಗಿದೆ – ಪ್ರಮೋದ್ ಮುತಾಲಿಕ್

- Advertisement -
Renault

Renault

Renault

- Advertisement -

ಉಡುಪಿ, ಅಕ್ಟೋಬರ್ 05: ಬಂಟ್ವಾಳದಲ್ಲಿ ಕಾಣಿಸಿಕೊಂಡ ‘ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ’ ಎಂಬ ರಸ್ತೆ ಬರಹ ಇದೊಂದು ಎಚ್ಚರಿಕೆ ಬರಹವಾಗಿದೆ ಎಂದು ಪ್ರಮೋದ್ ಮುತಾಲಿಕ್ ರಾಜ್ಯ ಸರಕಾರಕ್ಕೆ ಎಚ್ಚರಿಸಿದ್ದಾರೆ.

ಕೇಂದ್ರ ಸರಕಾರ ಪಿ ಎಫ್ ಐ ಬ್ಯಾನ್ ಮಾಡಿ ಇವರನ್ನು ಅರೆಸ್ಟ್ ಮಾಡಿದರೂ ಇವರ ಆಟ ಮುಗಿಯೋದಿಲ್ಲ, ಪಿ ಎಫ್ ಐನ ಸಾವಿರಾರು ಕಮಿಟೆಡ್ ಕಾರ್ಯಕರ್ತರು ಇನ್ನೂ ಇದ್ದಾರೆ.

ಕುತಂತ್ರ ಷಡ್ಯಂತ್ರ ದೇಶದ್ರೋಹಿ ಪ್ರವೃತ್ತಿ ಬ್ಯಾನ್ ನಿಂದ ತಡೆಯಲು ಸಾಧ್ಯವಿಲ್ಲ, ಪಿ ಎಫ್ ಐ ಪುಂಡಾಟಿಕೆಯ ಕಡಿವಾಣಕ್ಕೆ ಕೇಂದ್ರ ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು. ಪೊಲೀಸ್ ಗುಪ್ತಚರ ಇಲಾಖೆ ಸರಕಾರ ಅಲರ್ಟ್ ಆಗಬೇಕು ಎಂದರು. ಈ ರಸ್ತೆ ಬರಹ ಜಿಲ್ಲೆಯಲ್ಲಿ ಪಿ ಎಫ್ ಐ ಇನ್ನೂ ಆಕ್ಟಿವ್ ಆಗಿದೆ ಅನ್ನೋದರ ಸಂಕೇತವಾಗಿದೆ. ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments